ಐಸಿಸಿ ಮಹಿಳಾ ವಿಶ್ವಕಪ್ ಟೂರ್ನಿಯಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ ನಾಲ್ಕು ವಿಕೆಟ್ ಅಂತರದಿಂದ ಸೋಲಿಗೆ ಶರಣಾಗಿದೆ.
ನ್ಯೂಜಿಲೆಂಡ್ನ ಬೇ ಓವಲ್ನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಮಿಥಾಲಿ ರಾಜ್ ಬಳಗವು 36.2 ಓವರ್ಗಳಲ್ಲಿ 134 ರನ್ನಿಗೆ ಆಲೌಟ್ ಆಯಿತು. ಬಳಿಕ ಇಂಗ್ಲೆಂಡ್ 31.2 ಓವರ್ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು.
ಈ ಸೋಲಿನೊಂದಿಗೆ ಆಡಿರುವ ನಾಲ್ಕು ಪಂದ್ಯಗಳಲ್ಲಿ ತಲಾ ಎರಡು ಗೆಲುವು ಹಾಗೂ ಸೋಲು ಅನುಭವಿಸಿರುವ ಭಾರತ ನಾಲ್ಕು ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ.
That's that from the #ENGvIND game.
England win by 4 wickets.
Scorecard – https://t.co/cpWXApZ2Wt #ENGvIND #CWC22 pic.twitter.com/rSlMxy8ec6
— BCCI Women (@BCCIWomen) March 16, 2022
ಇನ್ನೊಂದೆಡೆ ಹ್ಯಾಟ್ರಿಕ್ ಸೋಲಿನ ಬಳಿಕ ಇಂಗ್ಲೆಂಡ್ ತಂಡವು ಟೂರ್ನಿಯಲ್ಲಿ ಮೊದಲ ಗೆಲುವಿನ ನಗೆ ಬೀರಿದೆ. ಬ್ಯಾಟರ್ಗಳ ವೈಫಲ್ಯ ಭಾರತದ ಹಿನ್ನಡೆಗೆ ಕಾರಣವಾಯಿತು. ಜೂಲನ್ ಗೋಸ್ವಾಮಿ ಮಹಿಳಾ ಏಕದಿನ ಕ್ರಿಕೆಟ್ನಲ್ಲಿ 250 ವಿಕೆಟ್ ಗಳಿಸಿದ ವಿಶ್ವದ ಮೊದಲ ಬೌಲರ್ ಎಂಬ ದಾಖಲೆ ನಿರ್ಮಿಸಿದರು.
https://youtu.be/7R_IfHf4X3A