ಚುನಾವಣೆ ಬಂತು ಅಂದ್ರೆ ಮೋದಿ ಎರಡು ಬಾಂಬ್ ರೆಡಿ ಇಟ್ಟುಕೊಂಡಿರುತ್ತಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಬೆಳಗಾವಿಯ ಹಾರೂಗೇರಿ ಪಟ್ಟಣದಲ್ಲಿ ಭಾನುವಾರ ನಡೆದ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡುದ ಅವರು, ಮೋದಿ ಕೈಯಲ್ಲಿ ಎರಡು ಬಾಂಬ್ ಇಟ್ಟುಕೊಂಡೆ ಇರ್ತಾರೆ. ಒಂದು ಆಕಡೆ ಹಾರಿಸುತ್ತಾರೆ ಇಲ್ಲಾ ಈ ಕಡೆ ಹಾರಿಸ್ತಾರೆ. ಆ ಬಾಂಬ್ ಗಳನ್ನ ಎಲ್ಲಿ ಹಾರಿಸುತ್ತಾರೆ ಗೊತ್ತಿಲ್ಲ. ನಂತರ ಪಾಕಿಸ್ತಾನದ ಹೆಸರು ಹೇಳಿ ಬಿಡುತ್ತಾರೆ ಎಂದರು.
ಗೆಲ್ಲಲು ಅವರು ಎಲ್ಲವನ್ನೂ ಮಾಡಲು ತಯಾರು ಇರುತ್ತಾರೆ. ಪಾಕಿಸ್ತಾನದ ಹೆಸರು ಹೇಳುತ್ತಾರೆ, ದೇಶ ಸಂಕಷ್ಟದಲ್ಲಿ ಇದೆ ಅಂತ ಹೇಳ್ತಾರೆ. ಕಾಂಗ್ರೆಸ್ ಕಾರ್ಯಕರ್ತರು ಹೀಗಾಗಿ ಗಟ್ಟಿಯಾಗಿರಬೇಕು. ಎಂಥ ಶಕ್ತಿ ಬಂದರೂ ಅದನ್ನ ಕಾರ್ಯಕರ್ತರು ನೀಗಿಸಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿಕೆ ನೀಡಿದ್ದಾರೆ.