ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಬಂಗಾರದ ಮೇಲಿನ ಆಮದು ಸುಂಕ ಹೆಚ್ಚಳ ಮಾಡಿದೆ.
ಈ ಮೂಲಕ ಬಂಗಾರ ಇನ್ನಷ್ಟು ದುಬಾರಿ ಆಗುವ ನಿರೀಕ್ಷೆ ಇದೆ. ಚಿನ್ನದ ಮೇಲಿನ ಆಮದು ಸುಂಕವನ್ನು ಶೇಕಡಾ 5ರಷ್ಟು ಅಂದರೆ ಶೇ.7.5ರಿಂದ ಶೇಕಡಾ 12.5ರಷ್ಟು ಹೆಚ್ಚಳ ಮಾಡಿದೆ.
ರಫ್ತು ಮತ್ತು ಆಮದು ಮೌಲ್ಯದಲ್ಲಿ ಭಾರೀ ಅಂತರ ಆಗುತ್ತಿರುವ ಹಿನ್ನೆಲೆಯಲ್ಲಿ ಚಿನ್ನದ ಆಮದಿನ ಮೇಲಿನ ನಿರ್ಬಂಧ ಹಾಕಲು ಸುಂಕ ಹೆಚ್ಚಳ ಮಾಡಲಾಗಿದೆ.
ಮೇ ತಿಂಗಳಲ್ಲಿ ಚಿನ್ನದ ಆಮದು 9 ಪಟ್ಟು ಹೆಚ್ಚಳ ಅಂದರೆ 7.7 ಶತಕೋಟಿ ಡಾಲರ್ ಮೊತ್ತದ ಚಿನ್ನದ ಆಮದು ಮಾಡಿಕೊಳ್ಳಲಾಗಿದೆ.
ಬಂಗಾರದ ಬೆಲೆ ಹೆಚ್ಚಳ:
ಇವತ್ತು ಚಿನ್ನದ ಬೆಲೆಯಲ್ಲಿ 1 ಸಾವಿರ ರೂಪಾಯಿಗಿಂತಲೂ ಹೆಚ್ಚು ಹೆಚ್ಚಳ ಆಗಿದೆ. 10 ಗ್ರಾಂ ಚಿನ್ನದ ಬೆಲೆ 1,100 ರೂಪಾಯಿ ಹೆಚ್ಚಳ ಆಗಿದ್ದು, 51,660 ರೂಪಾಯಿ ಗಡಿ ದಾಟಿದೆ.