ತಪ್ಪು ಮಾಹಿತಿ ಮತ್ತು ಆಫ್ಲೈನ್ ಕಾರ್ಯಕ್ಷಮತೆ ಹಿನ್ನೆಲೆ ಪ್ಲೇಸ್ಟೋರ್ನಲ್ಲಿರುವ ಸುಮಾರು 2000ಕ್ಕೂ ಹೆಚ್ಚು ಸಾಲ ನೀಡುವ ಆ್ಯಪ್ಗಳನ್ನು (Lending Apps) ತೆಗೆದು ಹಾಕಲಾಗಿದೆ ಎಂದು ಗೂಗಲ್ ಹೇಳಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಸಾಲ ನೀಡುವ ಆ್ಯಪ್ಗಳನ್ನು ತೆಗೆದು ಹಾಕಬಹುದು ಎನ್ನುವ ನಿರೀಕ್ಷೆಯಿದೆ.
ಗೂಗಲ್ ಪ್ಲೇಸ್ಟೋರ್ ನಲ್ಲಿ ಸಾಲ ನೀಡುವ ಆ್ಯಪ್ಗಳು (Lending Apps) ಭಾರೀ ಪ್ರಮಾಣದಲ್ಲಿ ಹೆಚ್ಚುತ್ತಿವೆ. ಈ ಆ್ಯಪ್ಗಳು ತಪ್ಪು ಮಾಹಿತಿ ನೀಡುತ್ತಿರುವುದು ಮಾತ್ರವಲ್ಲದೇ, ಆಫ್ಲೈನ್ನಲ್ಲಿ ಸಾಕಷ್ಟು ಅಪರಾಧ ಚಟುವಟಿಕೆಗಳನ್ನು ನಡೆಸುತ್ತಿವೆ. ಸಾಲ ಮರುಪಾವತಿಯ ಮೇಲೆ ಕಿರುಕುಳ ಮತ್ತು ಬ್ಲ್ಯಾಕ್ಮೇಲ್ಗಳನ್ನು ಮಾಡಿರುವ ಬಗ್ಗೆಯೂ ವರದಿಯಾಗಿವೆ. ಈ ನಿಟ್ಟಿನಲ್ಲಿ ಸಾಲ ನೀಡುವ 2 ಸಾವಿರಕ್ಕೂ ಹೆಚ್ಚು ಆ್ಯಪ್ಗಳನ್ನು ಗೂಗಲ್ ತೆಗೆದುಹಾಕಿದೆ.
ಇದನ್ನೂ ಓದಿ : Online ಮೂಲಕವೇ ಸಾಲ ಪಡೆಯಿರಿ – ಮೋದಿ ಸರ್ಕಾರದ ಹೊಸ ಯೋಜನೆ
ಮಾಹಿತಿ ಬಹಿರಂಗಪಡಿಸುವುದು, ತಪ್ಪು ಮಾಹಿತಿ ಮತ್ತು ಆಫ್ಲೈನ್ ಕಾರ್ಯಕ್ಷಮತೆಯಿಂದಾಗಿ ಈ ಆ್ಯಪ್ಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಗೂಗಲ್ ಕಂಪನಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಇಂತಹ ಆ್ಯಪ್ಗಳ ಮೇಲಿನ ನಿಯಮಾವಳಿಗಳನ್ನು ಇನ್ನಷ್ಟು ಕಠಿಣಗೊಳಿಸಲಾಗುವುದು ಎಂದು ಹೇಳಿದ್ದಾರೆ.
ಈ ಬಗ್ಗೆ ಮಾತನಾಡಿದ ಗೂಗಲ್ ಹಿರಿಯ ನಿರ್ದೇಶಕ, ಏಷ್ಯಾ ಪೆಸಿಫಿಕ್ ಟ್ರಸ್ಟ್ ಮತ್ತು ಸೆಕ್ಯುರಿಟಿ ಮುಖ್ಯಸ್ಥ ಸೈಕತ್ ಮಿತ್ರಾ, ಡಿಜಿಟಲ್ ಪ್ಲಾಟ್ಫಾರ್ಮ್ಗಳಲ್ಲಿ ಆನ್ಲೈನ್ ವಂಚನೆಗಳನ್ನು ತಡೆಗಟ್ಟಲು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಜನವರಿಯಿಂದ ಭಾರತದಲ್ಲಿ ಪ್ಲೇ ಸ್ಟೋರ್ನಿಂದ ಸಾಲ ನೀಡುವ 2,000ಕ್ಕೂ ಹೆಚ್ಚು ಅಪ್ಲಿಕೇಶನ್ಗಳನ್ನು ತೆಗೆದುಹಾಕಲಾಗಿದೆ. ಕಾರ್ಯವಿಧಾನಗಳ ಉಲ್ಲಂಘನೆ, ಮಾಹಿತಿ ಬಹಿರಂಗಪಡಿಸದಿರುವುದು ಮತ್ತು ಸುಳ್ಳು ಮಾಹಿತಿಯ ಆಧಾರದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸಲಹೆ ನೀಡಿದರು.
ಇದನ್ನೂ ಓದಿ : ಗೂಗಲ್ ಪ್ಲೇ ಸ್ಟೋರ್ನಲ್ಲಿವೆ ಅಪಾಯಕಾರಿ ಆ್ಯಪ್ಸ್ಗಳು – ಇಲ್ಲಿದೆ ಆ್ಯಪ್ಗಳ ಪಟ್ಟಿ
ಆರ್ಬಿಐ ಅನಿಯಂತ್ರಿತ ಸಾಲ ನೀಡುವ ಚಟುವಟಿಕೆಗಳನ್ನು ನಿಷೇಧಿಸುವ ಕಾನೂನನ್ನು ಶಿಫಾರಸು ಮಾಡಿದ ನಂತರ ಎಚ್ಚೆತ್ತುಗೊಂಡ ಗೂಗಲ್ ಈ ಕ್ರಮ ಕೈಗೊಂಡಿದೆ.
ಇದನ್ನೂ ಓದಿ : ಗೂಗಲ್ ನಂತರ ಅಮೇಜಾನ್ನಿಂದ ಕನ್ನಡಕ್ಕೆ ಅವಮಾನ-ಕೆರಳಿದ ಕನ್ನಡಿಗರು