ಸತತ ಎರಡನೇ ಏಕದಿನ ಪಂದ್ಯದಲ್ಲೂ ಭಾರತ ಮಹಿಳಾ ಕ್ರಿಕೆಟ್ ತಂಡ ವೆಸ್ಟ್ಇಂಡೀಸ್ ಮಹಿಳಾ ಕ್ರಿಕೆಟ್ ತಂಡದ ಎದುರು ದಾಖಲೆ ಜಯ ಗಳಿಸಿದೆ.
ವಡೋದರಾದಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಭಾರತದ ಮಹಿಳೆಯರು 115 ರನ್ಗಳಿಂದ (IND Women won by 115 runs) ಜಯಗಳಿಸಿದ್ದಾರೆ. ಭಾರತ 5 ವಿಕೆಟ್ ನಷ್ಟಕ್ಕೆ 358 ರನ್ ಕಲೆ ಹಾಕಿದ್ದರೆ, ವಿಂಡೀಸ್ 46.2 ಓವರ್ಗೆ 263 ರನ್ಗೆ ಆಲೌಟಾಯಿತು.
ಈ ಮೂಲಕ 3 ಪಂದ್ಯಗಳ ಏಕದಿನ ಸರಣಿಯನ್ನು 2-0 ಅಂತರದಲ್ಲಿ ಗೆದ್ದುಕೊಂಡಿದೆ.
ಬೃಹತ್ ಮೊತ್ತ ಬೆನ್ನತ್ತಿದ್ದ ಕೆರೆಬಿಯನ್ನರ ಪರ ಹೇಲೇ ಮಾಥ್ಯೂಸ್ 106 ರನ್ ಗಳಿಸಿ ಏಕಾಂಗಿ ಹೋರಾಟ ಮಾಡಿದರು.
ಭಾರತದ ಪರ ಪ್ರಿಯಾ ಶರ್ಮಾ 3 ವಿಕೆಟ್ ಪಡೆದರು. ದೀಪ್ತಿ ಶರ್ಮಾ, ಟಿಟಾಸ್ ಸಧು, ಪ್ರತಿಕಾ ರಾವಲ್ ತಲಾ 2 ವಿಕೆಟ್ ಗಳಿಸಿದರು.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾದ ಮಹಿಳೆಯರು ವಿಂಡೀಸ್ ಬೌಲರ್ಗಳನ್ನು ಚೆಂಡಾಡಿದರು.
ಈ ಪಂದ್ಯದಲ್ಲಿ ಹರ್ಲೀನ್ ದಿಯೋಲ್ (Harleen Deol) ಅವರು ಚೊಚ್ಚಲ ಅಂತಾರಾಷ್ಟ್ರೀಯ ಏಕದಿನ ಶತಕ ಸಿಡಿಸಿದರು. 103 ಎಸೆತಗಳನ್ನು ಎದುರಿಸಿದ ಹರ್ಲೀನ್ ದಿಯೋಲ್ 115 ರನ್ ಗಳಿಸಿದರು. 135 ನಿಮಿಷ ಬ್ಯಾಟಿಂಗ್ ಮಾಡಿದ್ದ ದಿಯೋಲ್ 16 ಬೌಂಡರಿಗಳನ್ನು ಬಾರಿಸಿ ಭಾರತ ಬೃಹತ್ ಮೊತ್ತ ಕಲೆ ಹಾಕುವುದಕ್ಕೆ ಕಾರಣಕರ್ತರಾದರು.
27 ವರ್ಷದ ದಿಯೋಲ್ ಅವರು ಮಹಿಳಾ ಐಪಿಎಲ್ನಲ್ಲಿ ಗುಜರಾತ್ ಟೈಟಾನ್ಸ್ ತಂಡದಲ್ಲಿದ್ದಾರೆ.
ಸ್ಮೃತಿ ಮಂದಾನ 53 ರನ್ ಗಳಿಸಿದ್ರೆ, ಪ್ರತಿಕಾ ರಾವಲ್ (pratika rawal pratika rawal cricketer) 76 ರನ್ ಗಳಿಸಿದ್ರು. ಜೆಮಿಮಾ ರೋಡಿಗ್ರಸ್ 36 ಎಸೆತಗಳಲ್ಲಿ 52 ರನ್ ಗಳಿಸಿದ್ದಾರೆ.
ADVERTISEMENT
ADVERTISEMENT