ಬ್ರಿಟಿಷರ ಬಳಿ ಕ್ಷಮೆ ಕೇಳಿ, ಬ್ರಿಟಿಷರ ಆಡಳಿತವನ್ನು ಒಪ್ಪಿಕೊಂಡು ಬ್ರಿಟಿಷರಿಗೆ ವಿಧೇಯನಾಗಿರುವುದಾಗಿ ಪತ್ರ ಬರೆದಿದ್ದ ವಿನಾಯಕ್ ದಾಮೋದರ್ ಸಾವರ್ಕರ್ ಅವರ ಚಿತ್ರವನ್ನು ಸ್ವಾತಂತ್ರ್ಯ ಅಮೃತ ಮಹೋತ್ಸವದ ಜಾಹೀರಾತಿನಲ್ಲಿ ನೀಡಿರುವ ಕರ್ನಾಟಕದ ಬಿಜೆಪಿ ಸರ್ಕಾರ ದೇಶದ ಮೊದಲ ಪ್ರಧಾನಿ ಮತ್ತು ಸ್ವಾತಂತ್ರ್ಯ ಹೋರಾಟಗಾರರೂ ಆಗಿದ್ದ ಜವಾಹರ್ಲಾಲ್ ನೆಹರು ಅವರ ಭಾವಚಿತ್ರವನ್ನು ಜಾಹೀರಾತಿನಿಂದ ಕೈಬಿಟ್ಟಿದೆ. ಈ ಮೂಲಕ ಕರ್ನಾಟಕದಲ್ಲಿ ಆಡಳಿತದಲ್ಲಿರುವ ಸಿಎಂ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಸರ್ಕಾರ ತನ್ನ ಸಣ್ಣತನ ಪ್ರದರ್ಶಿಸಿದಿದೆ.
ADVERTISEMENT
ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನ ನಮಗೆ ಸ್ಫೂರ್ತಿಯಾಗಲಿ, ಅವರ ದೇಶಪ್ರೇಮದ ಹಾದಿಯಲ್ಲಿ ಹೆಜ್ಜೆ ಹಾಕೋಣ ಎಂಬ ಒಕ್ಕಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಚಿತ್ರ ಬಳಸಿ ಕರ್ನಾಟಕ ವಾರ್ತಾ ಇಲಾಖೆ ಜಾಹೀರಾತು ನೀಡಿದೆ.
ಸ್ವಾತಂತ್ರ್ಯ ಹೋರಾಟಗಾರರ ಪಟ್ಟಿಯಲ್ಲಿ ಮಹಾತ್ಮಗಾಂಧಿ ಅವರಿದ್ದ ಹಿಡಿದು ಮೌಲಾನ ಅಬ್ದುಲ್ ಕಲಾಂ ಆಜಾದ್ ವರೆಗೂ 12 ಮಂದಿಯ ಬಗ್ಗೆ ಭಾವಚಿತ್ರ ಸಮೇತ ಚಿಕ್ಕ ವಿವರಣೆ ಇದೆ. ಈ 12 ಮಂದಿಯಲ್ಲಿ ನೆಹರು ಬಳಿಕ ಪ್ರಧಾನಿ ಆಗಿದ್ದ ಲಾಲ್ ಬಹದ್ದೂರು ಶಾಸ್ತ್ರಿಯವರ ಭಾವಚಿತ್ರ ಕೂಡಾ ಒಂದು.
ಕರ್ನಾಟಕದಲ್ಲಿ ಎಂಬ ಉಪ ಒಕ್ಕಣೆಯಲ್ಲಿ 16 ಮಂದಿ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಭಾವಚಿತ್ರ ಸಮೇತ ವಿವರಣೆ ಇದೆ.
ADVERTISEMENT