No Result
View All Result
ಇವತ್ತು ಭವ್ಯ ಭಾರತಕ್ಕೆ 75ನೇ ಸ್ವಾತಂತ್ರ್ಯೋತ್ಸವದ ಸಂಭ್ರಮ. ಬಾಹ್ಯಾಕಾಶದಲ್ಲೂ (Space) ಭಾರತದ ತ್ರಿವರ್ಣ ಧ್ವಜ (Indian Flag) ಹಾರಿದೆ.
ಸ್ಪೇಸ್ ಕಿಡ್ಸ್ ಇಂಡಿಯಾ (Space Kidz India) ಎಂಬ ಚೆನ್ನೈ (Chennai) ಮೂಲದ ಬಾಹ್ಯಾಕಾಶ ಸಂಘಟನೆ 30 ಕಿಲೋ ಮೀಟರ್ ಎತ್ತರದಲ್ಲಿ ಭಾರತದ ಧ್ವಜವನ್ನು ಹಾರಿಸಿದೆ.
ಈ ಬಗ್ಗೆ ಸ್ಪೇಸ್ ಕಿಡ್ಸ್ ಇಂಡಿಯಾ ವೀಡಿಯೋ ಹಂಚಿಕೊಂಡಿದೆ.
ಸ್ಪೇಸ್ ಕಿಡ್ಸ್ ಇಂಡಿಯಾ ಇತ್ತೀಚೆಗೆ 750 ವಿದ್ಯಾರ್ಥಿಗಳೇ ನಿರ್ಮಿಸಿದ್ದ ಆಜಾದಿಸ್ಯಾಟ್ಲೈಟ್ನ್ನು ಇಸ್ರೋದ (ISRO) ಹೊಸ ಉಪಗ್ರಹ ನೌಕೆ ಮೂಲಕ ಉಡಾಯಿಸಿತ್ತು. ಆದರೆ ಆ ಉಪಗ್ರಹ ಕಕ್ಷೆ (Orbit) ಸೇರಿರಲಿಲ್ಲ.
ಇತ್ತ ಭಾರತ ಮೂಲದ ಅಮೆರಿಕದ ಬಾಹ್ಯಾಕಾಶ ವಿಜ್ಞಾನಿ ರಾಜಾಚಾರಿ (Astronaut Raja Chari) ಅವರು ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ ಭಾರತದ ಧ್ವಜವನ್ನು ಹಾರಿಸಿದ್ದಾರೆ.

ಈ ಬಗ್ಗೆ ಅವರು ಟ್ವೀಟಿಸಿದ್ದಾರೆ. ತಮ್ಮ ಪೂರ್ವಜರ ಊರು ಹೈದ್ರಾಬಾದ್ (Hyderbad) ನಕಾಶೆಯನ್ನೂ ಹಂಚಿಕೊಂಡಿದ್ದಾರೆ.

No Result
View All Result
error: Content is protected !!