ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ನಲ್ಲಿ ಭಾರತ ಹೀನಾಯವಾಗಿ ಸೋತಿದೆ. ಮೂರನೇ ದಿನದಲ್ಲೇ ಇನ್ನಿಂಗ್ಸ್ ಮತ್ತು 32 ರನ್ಗಳಿಂದ ಸೋಲು ಕಂಡಿದೆ. ಈ ಮೂಲಕ ಎರಡು ಪಂದ್ಯಗಳ ಸರಣಿಯಲ್ಲಿ ಆಫ್ರಿಕಾ 1-0 ಅಂತರದ ಮುನ್ನಡೆ ಸಾಧಿಸಿದೆ.
ಭಾರತದ ಬ್ಯಾಟ್ಸ್ಮನ್ಗಳ ಕಳಪೆ ಬ್ಯಾಟಿಂಗ್ ಎರಡನೇ ಇನ್ನಿಂಗ್ಸ್ನಲ್ಲೂ ಮುಂದುವರೆಯಿತು. ಆಫ್ರಿಕಾ ಬೌಲರ್ಗಳನ್ನು ವಿರಾಟ್ ಕೊಹ್ಲಿ ಹೊರತುಪಡಿಸಿ ಉಳಿದ್ಯಾರೂ ಪ್ರತಿರೋಧಿಸಿ ಆಡಲಿಲ್ಲ. ಎರಡನೇ ಇನ್ನಿಂಗ್ಸ್ನಲ್ಲಿ ಭಾರತ ಕೇವಲ 34.1 ಓವರ್ಗೆ ಔಟಾಗಿದ್ದು ವಿಚಿತ್ರ.
ಶುಭ್ಮನ್ ಗಿಲ್ 26 ರನ್ ಗಳಿಸಿದರು. ನಾಯಕ ರೋಹಿತ್ ಶರ್ಮಾ ಒಳಗೊಂಡಂತೆ ನಾಲ್ವರು ಬ್ಯಾಟ್ಸ್ಮನ್ ಸೊನ್ನೆ ಸುತ್ತಿದರು. ಮೊದಲ ಇನ್ನಿಂಗ್ಸ್ನಲ್ಲಿ ಶತಕ ಸಿಡಿಸಿದ್ದ ಕೆ ಎಲ್ ರಾಹುಲ್ ಕೇವಲ 4 ರನ್ ಗಳಿಸಿ ಔಟಾದರು.
ಆಫ್ರಿಕಾ ಪರ ಕಗಿಸೋ ರಬಾಡಾ 2, ನ್ಯಾಂಡ್ರೆ ಬರ್ಜರ್ 4 ಮತ್ತು ಮಾರ್ಕೋ ಜ್ಯಾನ್ಸೆನ್ 3 ವಿಕೆಟ್ ಗಳಿಸಿದರು.