ADVERTISEMENT
ವೆಸ್ಟ್ಇಂಡೀಸ್ ವಿರುದ್ಧದ ಎರಡನೇ ಟೆಸ್ಟ್ನ ಮೊದಲ ದಿನ ಮೊದಲ ಇನ್ನಿಂಗ್ಸ್ನಲ್ಲಿ ಭಾರತ ಉತ್ತಮ ಮೊತ್ತವನ್ನೇ ಕಲೆ ಹಾಕಿದೆ.
ಮೊದಲ ದಿನದ ಅಂತ್ಯಕ್ಕೆ 4 ವಿಕೆಟ್ ನಷ್ಟಕ್ಕೆ 288 ರನ್ ಕಲೆ ಹಾಕಿದೆ.
ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ 57 ರನ್ ಗಳಿಸಿ ಔಟಾದರೆ ನಾಯಕ ರೋಹಿತ್ ಶರ್ಮಾ 80 ರನ್ ಗಳಿಸಿ ಮೊದಲ ವಿಕೆಟ್ಗೆ 139 ರನ್ಗಳ ಉತ್ತಮ ಆರಂಭವನ್ನೇ ನೀಡಿದರು.
ಶುಭ್ಮನ್ ಗಿಲ್ 10 ರನ್ ಗಳಿಸಿ ಔಟಾದರು. ಅಜಿಂಕ್ಯ ರಹಾನೆ 8 ರನ್ ಗಳಿಸಿದರು.
ವಿರಾಟ್ ಕೊಹ್ಲಿ 87 ರನ್ ಮತ್ತು ರವೀಂದ್ರ ಜಡೇಜಾ 36 ರನ್ ಗಳಿಸಿದ್ದು, ಇಬ್ಬರೂ ಔಟಾಗದೇ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್ನಲ್ಲಿ 30ನೇ ಅರ್ಧಶತಕ ಸಿಡಿಸಿದರು.
ADVERTISEMENT