ಮೊದಲ ಟೆಸ್ಟ್ನಲ್ಲಿ ಹೀನಾಯವಾಗಿ ಸೋತಿರುವ ವೆಸ್ಟ್ ಇಂಡೀಸ್ ಎರಡನೇ ಟೆಸ್ಟ್ನಲ್ಲಿ ಭಾರತದ ವಿರುದ್ಧ ಸ್ಪಿನ್ ರಣತಂತ್ರ ಬಳಸಲು ನಿರ್ಧರಿಸಿದೆ.
ಎರಡನೇ ಟೆಸ್ಟ್ಗೆ 13 ಆಟಗಾರರ ತಂಡದಲ್ಲಿ ಹೊಸ ಮುಖ ಆಫ್ ಸ್ಪಿನ್ನರ್ ಕೆವಿನ್ ಸಿನ್ಕ್ಲೈರ್ ಅವರನ್ನು ಸೇರಿಸಿಕೊಂಡಿದೆ. ಜುಲೈ 20ರಿಂದ ಎರಡನೇ ಟೆಸ್ಟ್ ಆರಂಭವಾಗಲಿದೆ.
ಆಲ್ರೌಂಡರ್ ರೇಮಾನ್ ರೈಫರ್ ಅವರನ್ನು ತಂಡದಿಂದ ಕೈಬಿಟ್ಟಿದೆ. ಮೊದಲ ಟೆಸ್ಟ್ನಲ್ಲಿ ರೈಫರ್ ಕೇವಲ 13 ರನ್ ಗಳಿಸಿದ್ದರು ಮತ್ತು ಒಂದೇ ಒಂದು ಟಿಕೆಟ್ ಪಡೆದಿರಲಿಲ್ಲ.
23 ವರ್ಷದ ಸಿನ್ಕ್ಲೈರ್ ಸೇರ್ಪಡೆಯಿಂದ ವಿಂಡೀಸ್ಗೆ ಮತ್ತೊಂದು ಬೌಲಿಂಗ್ ಆಯ್ಕೆ ಸಿಗಲಿದೆ. 23 ವರ್ಷದ ಬಲಗೈ ಆಫ್ ಸ್ಪಿನ್ನರ್ ವಿಂಡೀಸ್ ಪರವಾಗಿ 7 ಏಕದಿನ ಮತ್ತು 6 ಟಿ-ಟ್ವೆಂಟಿ ಪಂದ್ಯಗಳಲ್ಲಿ ಆಡಿದ್ದಾರೆ. ಜಿಂಬಾಬ್ವೆ ವಿರುದ್ಧ ಆಡಲಾದ ಐಸಿಸಿ ವಿಶ್ವಕಪ್ ಕ್ವಾಲಿಫೈಯರ್ ಪಂದ್ಯದಲ್ಲೂ ಆಡಿದ್ದರು.
ಮೊದಲ ಟೆಸ್ಟ್ನಲ್ಲಿ ಆರ್ ಅಶ್ವಿನ್ (12) ಮತ್ತು ರವೀಂದ್ರ ಜಡೇಜಾ (5) ಸ್ಪಿನ್ ಜೋಡಿ 17 ವಿಕೆಟ್ ಕಬಳಿಸಿತ್ತು.
ಕೆವಿನ್ ಸಿನ್ಕ್ಲೈರ್ ಏಕದಿನದಲ್ಲಿ 11 ಮತ್ತು ಟಿ-ಟ್ವೆಂಟಿಯಲ್ಲಿ 12 ವಿಕೆಟ್ ಪಡೆದಿದ್ದಾರೆ.
ADVERTISEMENT
ADVERTISEMENT