ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತ 10 ವಿಕೆಟ್ಗಳಿಂದ ಪ್ರಚಂಡ ಗೆಲುವು ಸಾಧಿಸಿದೆ.
ಓವಲ್ ಮೈದಾನದಲ್ಲಿ ನಡೆದ ಮೊದಲ ಕಾದಾಟದಲ್ಲಿ 111 ರನ್ಗಳ ಗುರಿಯನ್ನು ಭಾರತ ವಿಕೆಟ್ ನಷ್ಟವಿಲ್ಲದೇ ಕೇವಲ 18.4 ಓವರ್ಗಳಲ್ಲಿ 114 ರನ್ ಗಳಿಸುವ ಮೂಲಕ ಮುಟ್ಟಿತು.
ಈ ಮೂಲಕ ಮೂರು ಏಕದಿನ ಪಂದ್ಯಗಳ ಸರಣಿಯಲ್ಲಿ ಭಾರತ 1-0 ಮುನ್ನಡೆ ಸಾಧಿಸಿತು. ಈ ಮೂಲಕ ರೋಹಿತ್ ನಾಯಕತ್ವದಲ್ಲಿ ಆಡಿದ 14 ಏಕದಿನ ಪಂದ್ಯಗಳಲ್ಲಿ ಭಾರತ 12ರಲ್ಲಿ ಗೆದ್ದಿದೆ.
ನಾಯಕ ರೋಹಿತ್ ಶರ್ಮಾ 76 ರನ್ ಮತ್ತು ಶಿಖರ್ ಧವನ್ 31 ರನ್ ಗಳಿಸಿದರು.
ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ಬೂಮ್ರಾ ಬಿರುಗಾಳಿಗೆ ತರೆಗೆಲೆಯಾಗಿ ಪತನ ಕಂಡಿತು. 50 ಓವರ್ಗಳ ಪಂದ್ಯದಲ್ಲಿ ಕೇವಲ 25.2 ಓವರ್ನಲ್ಲಿ 110 ರನ್ ಇಂಗ್ಲೆಂಡ್ ಬ್ಯಾಟಿಂಗ್ ಪರಿಸಮಾಪ್ತಿ ಆಗಿದೆ.
19 ರನ್ಗೆ 6 ವಿಕೆಟ್ ಪಡೆಯುವ ಮೂಲಕ ಬೂಮ್ರಾ ಇಂಗ್ಲೆಂಡ್ನ ಬೆನ್ನುಮೂಳೆ ಮುರಿದರು.
ಮೊಹಮ್ಮದ್ ಶಮಿ 31 ರನ್ಗೆ 3 ವಿಕೆಟ್ ಪಡೆದರು.
ಇಂಗ್ಲೆಂಡ್ನ ನಾಲ್ಕು ಬ್ಯಾಟ್ಸ್ಮನ್ಗಳು ಡಕೌಟ್ ಆದರು.
ಜಾಸ್ ಬಟ್ಲರ್ 30 ರನ್ ಗಳಿಸಿದ್ದೇ ಇಂಗ್ಲೆಂಡ್ ಪರ ಅತೀ ಹೆಚ್ಚು ವೈಯಕ್ತಿಕ ಸ್ಕೋರ್.
1983ರ ವಿಶ್ವಕಪ್ ಬಳಿಕ ಭಾರತದ ವೇಗಿಗಳೇ ಇಂಗ್ಲೆಂಡ್ನ 10 ವಿಕೆಟ್ ಪಡೆದ ಮೊದಲ ಪಂದ್ಯ ಇದಾಗಿದೆ.