ತಾಲಿಬಾನ್ ನಾಯಕರು
ಮಹತ್ವದ ಬೆಳವಣಿಗೆಯೊಂದರಲ್ಲಿ ಭಾರತದ ವಿದೇಶಾಂಗ ಸಚಿವಾಲಯದ ತಂಡ ತಾಲಿಬಾನ್ ಹಿಡಿತದಲ್ಲಿರುವ ಅಪ್ಘಾನಿಸ್ತಾನಕ್ಕೆ ಭೇಟಿ ಕೊಟ್ಟಿದೆ. ಈ ಬಗ್ಗೆ ಭಾರತದ ವಿದೇಶಾಂಗ ಸಚಿವಾಲಯವೇ ಅಧಿಕೃತ ಮಾಹಿತಿ ನೀಡಿದೆ.
`ಭೇಟಿಯ ವೇಳೆ ಭಾರತದ ವಿದೇಶಾಂಗ ಸಚಿವಾಲಯದ ತಂಡ ತಾಲಿಬಾನ್ ಹಿರಿಯ ಸದಸ್ಯರ ಜೊತೆಗೆ ಮಾತುಕತೆ ನಡೆಸಲಿದೆ ಮತ್ತು ಅಫ್ಘಾನಿಸ್ತಾನದಲ್ಲಿ ಭಾರತ ಕೈಗೊಂಡಿರುವ ಮಾನವೀಯ ನೆರವುಗಳ ಅನುಷ್ಠಾನದ ಬಗ್ಗೆ ಚರ್ಚಿಸಲಿದೆ’ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ.
`ಅಫ್ಘಾನ್ ಜನತೆಯೊಂದಿಗೆ ಭಾರತದ ದೀರ್ಘಕಾಲದ ಐತಿಹಾಸಿಕ ಮತ್ತು ನಾಗರಿಕತೆ ಸಂಬAಧಗಳನ್ನು ಹೊಂದಿದ್ದು, ಆ ಸಂಬAಧಗಳೇ ನಮಗೆ ಮಾರ್ಗದರ್ಶನ ಮಾಡಲಿವೆ’ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ.
ವಿದೇಶಾಂಗ ಸಚಿವಾಲಯದ ಜಂಟಿ ಕಾರ್ಯದರ್ಶಿ ನೇತೃತ್ವದ ತಂಡ ಅಫ್ಘಾನಿಸ್ತಾನದಲ್ಲಿ ಮಾನವೀಯ ನೆರವಿನ ಜಾರಿಗೊಳಿಸುತ್ತಿರುವ ಅಂತಾರಾಷ್ಟಿçÃಯ ಸಂಘಟನೆಗಳನ್ನು ಭೇಟಿ ಆಗಲಿದೆ. ಅಲ್ಲದೇ ಭಾರತದ ಕಾರ್ಯಕ್ರಮ ಮತ್ತು ಯೋಜನೆಗಳು ಜಾರಿ ಆಗುತ್ತಿರುವ ಸ್ಥಳಗಳಿಗೂ ತಂಡ ಭೇಟಿ ನೀಡಲಿದೆ.
ಅಫ್ಘಾನಿಸ್ತಾನಕ್ಕೆ ಭಾರತ 20 ಸಾವಿರ ಮೆಟ್ರಿಕ್ ಟನ್ ಗೋಧಿ, 13 ಟನ್ ಔಷಧಗಳು, 5 ಲಕ್ಷ ಕೋವಿಡ್ ಲಸಿಕೆ ಮತ್ತು ಚಳಿಗಾಲದ ಬಟ್ಟೆಗಳನ್ನು ಕಳುಹಿಸಿಕೊಟ್ಟಿತ್ತು. ಭಾರತ ಇನ್ನಷ್ಟು ಔಷಧಗಳು ಮತ್ತು ಆಹಾರಧಾನ್ಯಗಳನ್ನು ಕಳುಹಿಸಿಕೊಡಲಿದೆ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ.
ಇರಾನ್ನಲ್ಲಿರುವ ಅಫ್ಘಾನಿಸ್ತಾನದ ನಿರಾಶ್ರಿತರಿಗೆ ಭಾರತ 10 ಲಕ್ಷ ಕೋವಾಕ್ಸಿನ್ ಲಸಿಕೆಯನ್ನೂ ನೀಡಿದೆ.