ಸ್ವಾತಂತ್ರ ನಂತರ 14 ಪ್ರಧಾನಮಂತ್ರಿಗಳ ಆಡಳಿತದಲ್ಲಿ ದೇಶದ ಸಾಲ 55 ಲಕ್ಷ ಕೋಟಿ ರೂಪಾಯಿ. ಆದರೆ, ಪ್ರಧಾನಿ ನರೇಂದ್ರ ಮೋದಿಯ 9 ವರ್ಷಗಳ ಆಡಳಿತದಲ್ಲಿ ದೇಶದ ಸಾಲ 155 ಲಕ್ಷ ಕೋಟಿಗೆ ಹೇಗೆ ಏರಿತು ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ದೇಶದ ಒಟ್ಟು ಸಾಲ ಮತ್ತು ಜಿಡಿಪಿ ನಡುವಿನ ಅನುಪಾತ ಶೇಕಡಾ 84ರಷ್ಟು ಹೆಚ್ಚಾಗಿದೆ. ಇದೇ ಹೊತ್ತಲ್ಲಿ ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ಈ ಅನುಪಾತ ಶೇಕಡಾ 64.5ರಷ್ಟಿದೆ. ದೇಶದ ಆರ್ಥಿಕತೆ ಬಗ್ಗೆ ಪ್ರಧಾನಿ ಮೋದಿ ಸರ್ಕಾರ ಶ್ವೇತಪತ್ರ ಹೊರಡಿಸಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ.
ಪ್ರಧಾನಿಗಳು ಬರೀ ಸುಳ್ಳು ಹೇಳುತ್ತಿದ್ದಾರೆ. ದೇಶದ ಆರ್ಥಿಕತೆಯ ನಿಜವಾದ ಮುಖವನ್ನು ನರೇಂದ್ರ ಮೋದಿ ಮರೆ ಮಾಚುತ್ತಿದ್ದಾರೆ ಎಂದು ಎಐಸಿಸಿ ವಕ್ತಾರೆ ಸುಪ್ರಿಯಾ ಶ್ರೀನಾಟೆ ಆರೋಪಿಸಿದ್ದಾರೆ.
ಸದ್ಯ ಪ್ರತಿ ಭಾರತೀಯನ ತಲೆ ಮೇಲೆ 1.2 ಲಕ್ಷ ರೂಪಾಯಿ ಸಾಲವಿದೆ.
ಮೋದಿ ಸರ್ಕಾರ ಕಳೆದ 9 ವರ್ಷದಲ್ಲಿ 100 ಲಕ್ಷ ಕೋಟಿ ಸಾಲ ಮಾಡಿದೆ.
ದೇಶದ 14 ಪ್ರಧಾನಮಂತ್ರಿಗಳು ಒಟ್ಟಾಗಿ ಸೇರಿ ಮಾಡದಷ್ಟು ಸಾಲವನ್ನು ಪ್ರಧಾನಿ ಮೋದಿ ಮಾಡಿದ್ದಾದರೂ ಏಕೆ? ಈ ಹಣವನ್ನು ಏನು ಮಾಡಿದರು? ಎಂದು ಸುಪ್ರಿಯಾ ಶ್ರೀನಾಟೆ ಪ್ರಶ್ನಿಸಿದ್ದಾರೆ.
ಪ್ರತಿಯೊಂದು ಸೆಕೆಂಡ್ಗೆ ದೇಶದ ಸಾಲದ ಪ್ರಮಾಣ 4 ಲಕ್ಷ ಏರಿಕೆ ಕಾಣುತ್ತಿದೆ
ಪ್ರತಿಯೊಂದು ನಿಮಿಷಕ್ಕೆ ದೇಶದ ಸಾಲದ ಪ್ರಮಾಣ 2.4 ಕೋಟಿ ರೂಪಾಯಿ ಏರಿಕೆ ಆಗುತ್ತಿದೆ
ಪ್ರತಿಯೊಂದು ತಿಂಗಳಿಗೆ ದೇಶದ ಸಾಲ ಪ್ರಮಾಣ 1.03 ಲಕ್ಷ ಕೋಟಿ ರೂಪಾಯಿಯಷ್ಟು ಏರಿಕೆ ಕಾಣುತ್ತಿದೆ.
ಈ ಸಾಲದ ಪ್ರಯೋಜನವನ್ನು ಪಡೆದವರು ಯಾರು? ಈ ಸಾಲದಿಂದ ಯಾರಿಗೆ ಅನುಕೂಲ ಆಗಿದೆ.
ಇತ್ತೀಚಿನ ವರ್ಷಗಳಲ್ಲಿ ಶೇಕಡಾ 83ರಷ್ಟು ಮಂದಿಯ ಆದಾಯ ಕುಸಿದಿದೆ..
ತಳಮಟ್ಟದಲ್ಲಿರುವ ಶೇಕಡಾ 50ರಷ್ಟು ಮಂದಿಯ ಬಳಿ ಇರುವುದು ಕೇವಲ 3ರಷ್ಟು ಆಸ್ತಿ ಮಾತ್ರ.
ಜಿಎಸ್ಟಿ ಸಂಗ್ರಹದಲ್ಲಿ ಇವರ ಪಾಲು ಶೇಕಡಾ 64ರಷ್ಟು.
ದೇಶದ ಟಾಪ್ 10 ಶ್ರೀಮಂತರ ಬಳಿ ಶೇಕಡಾ 80ರಷ್ಟು ಆಸ್ತಿಗಳಿವೆ.
ಜಿಎಸ್ಟಿ ಸಂಗ್ರಹದಲ್ಲಿ ಇವರ ಪಾಲು ಶೇಕಡಾ 3ರಷ್ಟು ಮಾತ್ರ.
ಮಿಲಿಯಾಂತರ ಜನ ಬಡತನದ ರೇಖೆಗಿಂತ ಕೆಳಗೆ ಜಾರಿದ್ದಾರೆ. ಸಣ್ಣ ಮತ್ತು ಮಧ್ಯಮ ಗಾತ್ರದ ಕೈಗಾರಿಕೆಗಳು ನಷ್ಟದ ಸುಳಿಯಲ್ಲಿವೆ. ಆದರೆ, ದೇಶದ ಬಿಲಿಯನಿಯರ್ಗಳ ಸಂಖ್ಯೆ ಮಾತ್ರ 102ರಿಂದ 166ಕ್ಕೆ ಜಂಪ್ ಆಗಿದೆ.
ಇದಕ್ಕೆ ಕಾರಣ ಏನು ಎಂದು ಪ್ರಧಾನಿಯನ್ನು ಕಾಂಗ್ರೆಸ್ ಪ್ರಶ್ನಿಸಿದೆ.
ADVERTISEMENT
ADVERTISEMENT