ಇನ್ಪೋಸಿಸ್ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ(CEO) ಸಲೀಲ್ ಪರೇಖ್ ಅವರು ವಾರ್ಷಿಕವಾಗಿ ಬರೋಬ್ಬರಿ 71 ಕೋಟಿ.ರೂಗಳ ಸಂಬಳ ಪಡೆದುಕೊಂಡಿದ್ದಾರೆ.
ಸ್ಟಾಕ್ ಎಕ್ಸ್ಚೇಂಜ್ ಫೈಲಿಂಗ್ ಪ್ರಕಾರ, ಇನ್ಫೋಸಿಸ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಲೀಲ್ ಪರೇಖ್ ಅವರು 2021-22 ನೇ ಹಣಕಾಸು ವರ್ಷದಲ್ಲಿ 71 ಕೋಟಿ ಸಂಬಳ ಪಡೆದುಕೊಂಡಿದ್ದಾರೆ. ಇದು ಇವರು 2020-21 ನೇ ಸಾಲಿನಲ್ಲಿ ಇವರು ಪಡೆದಿದ್ದ 49.68 ಕೋ. ರೂ ಸಂಬಳಕ್ಕಿಂತ ಬರೋಬ್ಬರಿ ಸುಮಾರು 43 ಪ್ರತಿಶತ ಹೆಚ್ಚು.
ಪರೇಖ್ ಅವರ ಸಂಬಳದ ವಿವರ ಇಂತಿದೆ – ಸ್ಟಾಕ್ ಆಯ್ಕೆಗಳ ಖಾತೆಯಲ್ಲಿ 52.33 ಕೋಟಿ ರೂ. ಪರ್ಕ್ವಿಸೈಟ್‌ಗಳು, 5.69 ಕೋಟಿ ರೂ. ಸ್ಥಿರ ವೇತನ, ನಿವೃತ್ತಿ ಪ್ರಯೋಜನಗಳಲ್ಲಿ 38 ಲಕ್ಷ ರೂ. ಸೇರಿದಂತೆ, ವೇತನದಲ್ಲಿ 12.62 ಕೋಟಿ ರೂ. ವ್ಯತ್ಯಯ ವೇತನವೂ ಸೇರಿದೆ.
ಭಾರತದ ಎರಡನೇ ಅತಿದೊಡ್ಡ ಐಟಿ ಸೇವಾ ಕಂಪನಿಯಾದ ಇನ್ಫೋಸಿಸ್ ಲಿಮಿಟೆಡ್‌ನ ಮಂಡಳಿಯು ಸಲೀಲ್ ಪರೇಖ್ ಅವರನ್ನು ಐದು ವರ್ಷಗಳ ಅವಧಿಗೆ ಇನ್ಫೋಸಿಸ್ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಮತ್ತು ವ್ಯವಸ್ಥಾಪಕ ನಿರ್ದೇಶಕ (ಎಂಡಿ) ರನ್ನಾಗಿ ಮರು ನೇಮಕ ಮಾಡಲಾಗಿದೆ. ಇವರ ಅಧಿಕಾರದ ಅವಧಿಯು ಮಾರ್ಚ್ 2027ರ ವರೆಗೆ ಇರಲಿದೆ.
ಶ್ರೀ ಪರೇಖ್ ಅವರು ಜನವರಿ 2018 ರಿಂದ ಇನ್ಫೋಸಿಸ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಇನ್ಫೋಸಿಸ್ ಸಂಸ್ಥೆಯ ಕಾರ್ಯನಿರ್ವಾಹಕೇತರ ಅಧ್ಯಕ್ಷರಾದ ನಂದನ್ ನಿಲೇಕಣಿ ಅವರು ಸಂಸ್ಥೆಯಿಂದ ಯಾವುದೇ ಸಂಭಾವನೆಯನ್ನು ಸ್ವೀಕರಿಸದಿರಲು ಸ್ವಯಂಪ್ರೇರಣೆಯಿಂದ ನಿರ್ಧರಿಸಿ ಘೋಷಿಸಿದ್ದರು.