ಬಾಲಿವುಡ್ ನಟ ಅಜಯ್ ದೇವಗನ್ ನಾಯಕ ನಟನೆಯ ಗಾಡ್ ಫಾದರ್ (Thank God Film) ಚಿತ್ರದಲ್ಲಿ ಹಿಂದೂ ದೇವರಾದ ಚಿತ್ರಗುಪ್ತನ ಅವಹೇಳನ ಮಾಡಲಾಗಿದೆ. ಈ ಚಿತ್ರದ ಪ್ರದರ್ಶನವನ್ನು ನಿರ್ಬಂಧಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಮಧ್ಯಪ್ರದೇಶದ ಬಿಜೆಪಿ ಸಚಿವ ಪತ್ರ ಬರೆದು ವಿನಂತಿಸಿಕೊಂಡಿದ್ದಾರೆ.
ಕೇಂದ್ರ ಸಚಿವ ಅನುರಾಗ್ ಠಾಕೂರ್ ಗೆ ಮಧ್ಯಪ್ರದೇಶದ ಬಿಜೆಪಿ ಸಚಿವ ವಿಶ್ವಾಸ್ ಸಾರಂಗ್ ಪತ್ರ ಬರೆದಿದ್ದಾರೆ. ಗಾಡ್ ಫಾದರ್ ಚಿತ್ರದಲ್ಲಿ (Thank God Film) ಹಿಂದೂ ದೇವರಾದ ಚಿತ್ರಗುಪ್ತನ ಬಗ್ಗೆ ಅವಹೇಳನ ಕಾರಿಯಾಗಿ ಚಿತ್ರಿಸಲಾಗಿದೆ. ಆದ್ದರಿಂದ ಈ ಚಿತ್ರವನ್ನು ಪ್ರದರ್ಶನದಿಂದ ನಿರ್ಬಂಧಿಸಬೇಕು ಎಂದು ವಿನಂತಿಸಿಕೊಂಡಿದ್ದಾರೆ.
ಇತ್ತೀಚೆನ ಕೆಲ ತಿಂಗಳುಗಳಲ್ಲಿ ಬಾಲಿವುಡ್ನ ಹಲವಾರು ಚಿತ್ರಗಳು ಬಾಯ್ಕಾಟ್ ಅಸ್ತ್ರಕ್ಕೆ ಸಿಲುಕುತ್ತಿವೆ. ಚಿತ್ರದ ನಟ, ನಟಿ ಅಥವಾ ನಿರ್ದೇಶರು ಹಿಂದೂ ದೇವರ ಬಗ್ಗೆ ಅವಹೇಳನ ಮಾಡಿದ್ದಕ್ಕಾಗಿ ಈ ಅಸ್ತ್ರ ಹೆಚ್ಚಾಗಿ ಪ್ರಯೋಗವಾಗಿದೆ.
ಕೆಲ ತಿಂಗಳುಗಳ ಹಿಂದೆ ಬಿಡುಗಡೆಯಾಗಿದ್ದ ನಟ ಅಮೀರ್ ಕಾನ್ ಅವರ ಲಾಲ್ ಸಿಂಗ್ ಚಡ್ಡಾ, ಅಕ್ಷಯ್ ಕುಮಾರ್ರ ರಕ್ಷಾ ಬಂಧನ್, ವಿಜಯ್ ದೇವರಕೊಂಡ ನಟನೆಯ ಲೈಗರ್, ಈಗ ರಣ್ಬೀರ್ ಸಿಂಗ್ ನಟನೆಯ ಬ್ರಹಾಸ್ತ್ರ ಚಿತ್ರ ಬಾಯ್ಕಾಟ್ ಅಸ್ತ್ರಕ್ಕೆ ಸಿಲುಕಿವೆ. ಬ್ರಹಾಸ್ತ್ರ ಚಿತ್ರ ಮಾತ್ರ ಈ ಅಸ್ತ್ರದಿಂದ ಅಲ್ಪಮಟ್ಟಿಗೆ ಹೊರಬಂದು ಬಹುಕೋಟಿ ಗಳಿಕೆ ದಾಖಲಿಸಿದೆ. ಉಳಿದ ಚಿತ್ಗಳು ಬಾಯ್ಕಾಟ್ ಟ್ರೆಂಡ್ಗೆ ಸಿಲುಕಿ ದೂಳಿಪಟವಾಗಿವೆ.