ಖ್ಯಾತ ನಿರ್ದೇಶಕ ರಾಜಮೌಳಿ ಅವರು RRR ಸಕ್ಸಸ್ ಖುಷಿಯಲ್ಲಿ ಇದ್ದಾರೆ. ತೆರೆ ಮೇಲಿನ ಅದ್ಭುತಕ್ಕೆ ನೋಡುಗ ಪ್ರಭುಗಳು ಜೈ ಎಂದ ಪರಿಣಾಮ 1000 ಕೋಟಿ ಕ್ಲಬ್ ಸೇರಿದೆ. ಈ ಸಂದರ್ಭದಲ್ಲಿಯೇ ರಾಜಮೌಳಿ ಕುರಿತ ಎರಡು ಇಂಟ್ರೆಸ್ಟಿಂಗ್ ವಿಚಾರಗಳು ಬಯಲಾಗಿವೆ.
ಒಂದು ರಾಜಮೌಳಿ ಅವರಿಗೆ ಯಾವುದೇ ದೇವರು, ಧರ್ಮದ ಮೇಲೆ ನಂಬಿಕೆ ಇಲ್ಲ. ಅವರು ಆಸ್ತಿಕರಲ್ಲ. ನಾಸ್ತಿಕರು. ಆದರೇ, ಬೇರೆಯವರ ಧರ್ಮದ, ದೇವರ ಮೇಲಿನ ನಂಬಿಕೆಯನ್ನು ಗೌರವಿಸುವುತ್ತಾರೆ. ಅವರ ಆಪ್ತರ ಖುಷಿಗಾಗಿ ದೇಗುಲಗಳಿಗೂ ಹೋಗಿ ಬರುತ್ತಾರೆ.
ಎರಡು.. ರಾಜಮೌಳಿಯನ್ನು ಟಾಲಿವುಡ್ ನಲ್ಲಿ ಯಾರು ಕೂಡಾ ಹೆಸರಿಡಿದು ಕರೆಯಲ್ಲ. ಎಲ್ಲರೂ ಪ್ರೀತಿಯಿಂದ ಜಕ್ಕಣ್ಣ ಎನ್ನುತ್ತಾರೆ. ಈ ಹೆಸರನ್ನು ಮೊದಲು ಕರೆದಿದ್ದು ಖ್ಯಾತ ಟಿವಿ ಆಂಕರ್ ಸುಮಾ ಕನಕಾಲ ಪತಿ ರಾಜೀವ್ ಕನಕಾಲ. ರಾಜಮೌಳಿ ಯವರು ಶಾಂತಿ ನಿವಾಸಮ್ ಧಾರವಾಹಿಯ ಶೂಟಿಂಗ್ ಸಂದರ್ಭದಲ್ಲೇ ಅವರ ಪರ್ಫೆಕ್ಟ್ ನೆಸ್ ನೋಡಿ ರಾಜೀವ್ ಹಾಗೆ ಕರೆದಿದ್ದರು. ಇದು ಜೂನಿಯರ್ NTR ಕಿವಿಗೆ ಬಿದ್ದು, ಮುಂದೆ ಇಡೀ ಟಾಲಿವುಡ್ಡಿಗೆ ಹರಡಿತು