ಅಪ್ಪ, ವರ ನಟ, ಡಾ. ರಾಜಕುಮಾರ್.. ಕನ್ನಡ ಸಿನೆಮಾ ಲೋಕದ ಲೆಜೆಂಡರಿ ನಟ.. ತಾಯಿ ಪಾರ್ವತಮ್ಮ ನಿರ್ಮಾಪಕಿ… ದೊಡ್ಡ ಅಣ್ಣ ಶಿವರಾಜ್ ಕುಮಾರ್ ದೊಡ್ಡ ಹೀರೋ.. ಎರಡನೇ ಅಣ್ಣ ರಾಘವೇಂದ್ರ ರಾಜ್ ಕುಮಾರ್ ನಟ, ನಿರ್ಮಾಪಕ.. ಇಡೀ ಕುಟುಂಬ ಸಿನೆಮಾ ನೇಪತ್ಯದಿಂದ ಕೂಡಿದ್ದರೂ ಬಾಲ್ಯದಿಂದಲೇ ನಟಿಸುತ್ತಿದ್ದರೂ, ತಮ್ಮ ಟ್ಯಾಲೆಂಟ್, ಒಳ್ಳೆಯತನ, ಮುಗ್ಧ-ನಿಷ್ಕಲ್ಮಶ ನಗುವಿನ ಅಪ್ಪು ಎಂದರೇ ಕನ್ನಡದ ಜನತೆಗೆ ತುಂಬಾನೇ ಇಷ್ಟ.
ತೆರೆ ಮೇಲೆ ಸ್ಪ್ರಿಂಗ್ ರೀತಿಯಲ್ಲಿ ಅಪ್ಪು ಸ್ಟೆಪ್ ಹಾಕುತ್ತಿದ್ದರೇ ಕಣ್ಣ ರೆಪ್ಪೆ ಮೀಟುಕಿಸದಂತೆ ಜನ ನೋಡುತ್ತಿದ್ದರು. ಅವರ ಡೈಲಾಗ್ ಡೆಲಿವರಿಯನ್ನು ಮಾಸ್ ಆಡಿಯನ್ಸ್ ಜೊತೆ ಕ್ಲಾಸ್ ಆಡಿಯನ್ಸ್ ಕೂಡ ವಿಪರೀತವಾಗಿ ಎಂಜಾಯ್ ಮಾಡುತ್ತಿದ್ದರು. ಕೇವಲ ಯೂತ್ ಫಾಲ್ಲೋಯಿಂಗ್ ಮಾತ್ರವಲ್ಲ, ಚಿಕ್ಕ ವಯಸ್ಸಿನಲ್ಲೇ ಫ್ಯಾಮಿಲಿ ಓರಿಯೆಂಟಡ್ ಕಂಟೆಂಟ್ ಇರುವ ಚಿತ್ರಗಳಲ್ಲಿ ಕಾಣಿಸಿಕೊಂಡು ಹೆಂಗೆಳೆಯರ ಪ್ರೀತಿಯನ್ನು ಸಂಪಾದಿಸಿದ್ದರು ಅಪ್ಪು.
‘ಗುಡಿಸಲೇ ಆಗಲಿ, ಅರಮನೆ ಆಗಲಿ.. ಆಟ ನಿಲ್ಲದು.
ಹಿರಿಯರೇ ಇರಲಿ.. ಕಿರಿಯರೆ ಇರಲಿ ಬೇಧ ತೋರದು ಎಂದೂ ಬೇಧ ತೋರದು.. ಎಲ್ಲಾ ಇದ್ದು ಏನು ಇಲ್ಲದ ಹಾಗೆ ಬದುಕಿರುವ…
ರಾಜಕುಮಾರ ಚಿತ್ರದ ಟೈಟಲ್ ಸಾಂಗ್ ನ ಪ್ರತಿಯೊಂದು ಸಾಲನ್ನು ಅಪ್ಪು ಉದ್ದೇಶಿಸಿಯೇ ಬರೆದಂತಿವೆ.. ಅಷ್ಟು ಪರ್ಫೆಕ್ಟ್ ಆಗಿ ಸೂಟ್ ಆಗುತ್ತದೆ ಈ ಹಾಡು..
ಇಂತಹ ಶ್ರೀಮಂತ ನೆನಪನ್ನು ಬಿಟ್ಟು ನಮ್ಮೊಡನಿಂದ ಅರ್ಧಂತರದಲ್ಲೇ ಎದ್ದು ಬಾರದ ಲೋಕಕ್ಕೆ ಹೋದವರು ಅಪ್ಪು.
ಇಂತಹ ಅಪ್ಪು ಗೆ ಇಂದು ಜನುಮ ದಿನ. ಅವರು ನಮ್ಮೊಂದಿಗಿಲ್ಲ. ಆದರೆ ನಮ್ಮ ಮನೆ ಮಗನ ಜನ್ಮದಿನವೇನೋ ಎಂಬಷ್ಟರ ಮಟ್ಟಿಗೆ ಮಾರ್ಚ್ 17ನ್ನು ನಾವು ಸಂಭ್ರಮಿಸುತ್ತೇವೆ. ಈ ಸಂಭ್ರಮದ ಗಳಿಗೆಯಲ್ಲಿ ಅಪ್ಪು ಪುನೀತ್ ಗೆ ಸಂಬಂಧಿಸಿದ, ಒಂದಿಷ್ಟು ಕುತೂಹಲಕರ ಮಾಹಿತಿ ಇಲ್ಲಿ ಉಂಟು ನೋಡಿ..
* ಪುನೀತ್ ಅಕಾಲಿಕ ಸಾವು ಕಂಡಾಗ ಅವರ ವಯಸ್ಸು 47.. ಅಪ್ಪು ಸಿನಿ ಜೀವನದ ವಯಸ್ಸು 46..
* ಜನಿಸಿದ ಆರೇ ತಿಂಗಳಲ್ಲಿ ಲೋಹಿತ್, ತಮ್ಮ ಲೀಡ್ ರೋಲ್ ನಲ್ಲಿ ಕಾಣಿಸಿಕೊಂಡಿದ್ದ ಪ್ರೇಮದ ಕಾಣಿಕೆ ಚಿತ್ರದಲ್ಲಿ ಬಣ್ಣ ಹಚ್ಚಿದ್ದರು .
* ಬೆಟ್ಟದ ಹೂ ಸಿನಿಮಾದ ಅಭಿನಯಕ್ಕಾಗಿ ಬೆಸ್ಟ್ ಚೈಲ್ಡ್ ಆರ್ಟಿಸ್ಟ್ ನ್ಯಾಷನಲ್ ಅವಾರ್ಡ್ ಪಡೆದುಕೊಂಡಿದ್ದರು ಅಂದಿನ ಲೋಹಿತ್.
* 1976ರಿಂದ 1989ರ ಅವಧಿಯಲ್ಲಿ ಸಾಕಷ್ಟು ಕನ್ನಡದ ಸಿನೆಮಾಗಳಲ್ಲಿ ಅಪ್ಪು ನಟಿಸಿದ್ದರು.
* ಪೂರಿ ಜಗನ್ನಾಥ್ ನಿರ್ದೇಶನದಲ್ಲಿ 2002ರಲ್ಲಿ ಹೀರೋ ಆಗಿ ಅಪ್ಪು ಸಿನೆಮಾ ಮೂಲಕ ಪುನೀತ್ ರೀ ಎಂಟ್ರಿ.
* ಅಪ್ಪು ನಟನೆಯ ಮೊದಲ ಆರು ಚಿತ್ರಗಳು 100 ಡೇಸ್ ಓಡಿವೆ. ಈ ದಾಖಲೆಯನ್ನು ಯಾರಿಗೂ ಬ್ರೇಕ್ ಮಾಡಲು ಆಗಿಲ್ಲ.
*19 ವರ್ಷಗಳ ಹೀರೋ ವೃತ್ತಿ ಜೀವನದಲ್ಲಿ ಅಪ್ಪು ನಟಿಸಿದ್ದು 29ಚಿತ್ರಗಳಲ್ಲಿ..
* ಸ್ಯಾಂಡಲ್ವುಡ್ ನ ಮೋಸ್ಟ್ ಸಕ್ಸಸ್ ಫುಲ್ ಹೀರೋ ಅಪ್ಪು. ಅದಕ್ಕೆ ಅಭಿಮಾನಿಗಳು ಪ್ರೀತಿಯಿಂದ ಪವರ್ ಸ್ಟಾರ್ ಎಂದು ಕರೆದರು.
* ಮುಂಗಾರು ಮಳೆ ಸಿನಿಮಾದ ಕಲೆಕ್ಷನ್ ಅನ್ನು ಬಹಳ ವರ್ಷಗಳ ನಂತರ ಬ್ರೇಕ್ ಮಾಡಿದ್ದು ಪುನೀತ್ ನಟನೆಯ ರಾಜಕುಮಾರ ಚಿತ್ರ.. ನಂತರ KGF ಗಳಿಕೆಯಲ್ಲಿ ಹೊಸ ದಾಖಲೆಯನ್ನೇ ನಿರ್ಮಿಸಿತು.
* ಈಗ ಅಪ್ಪು ಇಲ್ಲ.. ಆದರೆ ಅವರ ಕೊನೆಯ ಚಿತ್ರ ಜೇಮ್ಸ್ ಐದು ಭಾಷೆಯಲ್ಲಿ ವಿಶ್ವದ 22 ದೇಶಗಳಲ್ಲಿ ನಾಲ್ಕು ಸಾವಿರಕ್ಕೂ ಹೆಚ್ಚು ಸ್ಕ್ರೀನ್ ಗಳಲ್ಲಿ ರಿಲೀಸ್ ಆಗಿದೆ. ಇದು ಕನ್ನಡದ ಮಟ್ಟಿಗೆ ಮಹಾ ದಾಖಲೆ. ಅಭಿಮಾನಿ ದೇವರುಗಳ ಸಂಭ್ರಮ ಮುಗಿಲು ಮುಟ್ಟಿದೆ.
* ನಟ, ಪ್ಲೇ ಬ್ಯಾಕ್ ಸಿಂಗರ್, ಟೆಲಿವಿಷನ್ ಪ್ರೆಸೆಂಟರ್.. ಅಪ್ಪು ಮಲ್ಟಿ ಟಾಲೆಂಟೆಡ್ ಪರ್ಸನ್.. ಕಲೆಯ ವಿಚಾರದಲ್ಲಿ ಅಪ್ಪನಿಗೆ ಸರಿಸಾಟಿ ಆಗುವಂತಹ ಮಾಣಿಕ್ಯ.
* ಅಜಾತಶತ್ರು, ಡೌನ್ ಟು ಅರ್ಥ್ ಪರ್ಸನ್, ಹಮ್ಮುಬಿಮ್ಮಿಲ್ಲದ ವ್ಯಕ್ತಿತ್ವ.. ಇದು ಅಪ್ಪು ಕಹಾನಿ