ಒಂದೂವರೆ ತಿಂಗಳ ಗ್ಯಾಪಲ್ಲಿ ಟೊಮೆಟೋ ದರ ಶೇಕಡಾ 300ರಷ್ಟು ಹೆಚ್ಚಾಗಿದೆ. ಕೆಲವು ಕಡೆ ಸೆಂಚುರಿ ಬಾರಿಸಿದರೆ, ಇನ್ನೂ ಕೆಲವೆಡೆ ಡಬಲ್ ಸೆಂಚುರಿ ಬಾರಿಸಿದೆ. ಮತ್ತೂ ಕೆಲವೆಡೆ ತ್ರಿಶತಕದ ಸನಿಹದಲ್ಲಿದೆ. ಇದನ್ನು ನೋಡಿ ಜನಸಾಮಾನ್ಯ ಶಾಕ್ ಆಗುತ್ತಿದ್ದಾರೆ. ಟೊಮೆಟೋ ದಳ್ಳುರಿ ಬಗ್ಗೆ ಲೋಕಲ್ ಸರ್ಕಲ್ಸ್ ಸರ್ವೇಯಲ್ಲಿ ಬಯಲಾದ ಕುತೂಹಲಕಾರಿ ಮಾಹಿತಿ ಇಲ್ಲಿದೆ.
* ಶೇಕಡಾ 68ರಷ್ಟು ಕುಟುಂಬಗಳು ಟೊಮೆಟೋ ಬಳಕೆಯನ್ನೇ ಕಡಿಮೆ ಮಾಡಿವೆ. ಶೇಕಡಾ 14ರಷ್ಟು ಕುಟುಂಬಗಳು ಟೊಮೆಟೋ ಬಳಸೋದನ್ನೇ ಬಿಟ್ಟಿವೆ.
* ಮುಂಬರುವ ದಿನಗಳಲ್ಲಿ ಕಿಲೋ ಟೊಮೆಟೋ 300 ರೂಪಾಯಿ ದಾಟಲಿದೆ. ಕೆಲವು ಕಡೆ ಸುರಿಯುತ್ತಿರುವ ಕುಂಭದ್ರೋಣ ಮಳೆಯೇ ಇದಕ್ಕೆ ಕಾರಣ.
* ಜೂನ್ 24ರಂದು ದೆಹಲಿಯಲ್ಲಿ ಕೆಜಿ ಟೊಮೆಟೋ ಬೆಲೆ 20ರಿಂದ 30 ರೂಪಾಯಿ ಇತ್ತು. ಅದರೆ ಈಗ ದೆಹಲಿಯಲ್ಲಿ ಟೊಮೆಟೋ ಬೆಲೆ 180ರಿಂದ 220 ರೂಪಾಯಿ ಇದೆ.
* ಜೂನ್ನಲ್ಲಿ ಕೆಜಿ ಟೊಮೆಟೋ ಬೆಲೆ 40 ರೂಪಾಯಿ ಇತ್ತು. ಜುಲೈ ಮೊದಲ ವಾರಕ್ಕೆ 100 ರೂಪಾಯಿ ಆಯಿತು. ಭಾರಿ ಮಳೆ ಕಾರಣ ಪೂರೈಕೆಯಲ್ಲಿ ವ್ಯತ್ಯಯ, ಟೊಮೆಟೋ ಬೆಳೆ ನಾಶದ ಕಾರಣ ಕೆಜಿ ಟೊಮೆಟೋ ಬೆಲೆ 200 ರೂಪಾಯಿ ದಾಟಿದೆ.
* ನೂರರಲ್ಲಿ 87 ಮಂದಿ ಕೆಜಿ ಟೊಮೆಟೋಗೆ 100ರೂಪಾಯಿಗಿಂತ ಹೆಚ್ಚು ವೆಚ್ಚ ಮಾಡುತ್ತಿದ್ದಾರೆ. ಶೇಕಡಾ 13ರಷ್ಟು ಮಂದಿ ಮಾತ್ರ 100 ರೂಪಾಯಿಗಿಂತ ಕಡಿಮೆ ಖರ್ಚು ಮಾಡುತ್ತಿದ್ದಾರೆ.
* ಸಮೀಕ್ಷೆಯಲ್ಲಿ ಪಾಲ್ಗೊಂಡ 10,972 ಮಂದಿಯಲ್ಲಿ ಶೇಕಡಾ 41ರಷ್ಟು ಮಂದಿ ಕೆಜಿ ಟೊಮೆಟೋಗೆ 100-150ರೂ. ನಡುವೆ ಪಾವತಿ ಮಾಡುತ್ತಿದ್ದಾರೆ. ಶೇಕಡಾ 27ರಷ್ಟು ಮಂದಿ 150-200 ರೂ. ಮಧ್ಯೆ, ಶೇಕಡಾ 14ರಷ್ಟು ಮಂದಿ 200-250 ರೂ., ಶೇಕಡಾ 5ರಷ್ಟು ಮಂದಿ 250 ರೂ. ಪಾವತಿ ಮಾಡುತ್ತಿದ್ದಾರೆ.
* ದೇಶದ 242 ಜಿಲ್ಲೆಗಳಲ್ಲಿ ಈ ಸಮೀಕ್ಷೆ ನಡೆಸಲಾಗಿದೆ. ಶೇಕಡಾ 65ರಷ್ಟು ಮಂದಿ ಪುರುಷರು, ಶೇಕಡಾ 35ರಷ್ಟು ಮಹಿಳೆಯರು ಸ್ಪಂದಿಸಿದ್ದಾರೆ.