ನಾವು ಫೈವ್ ಜಿ ಜಮಾನದಲ್ಲಿದ್ದರೂ ಬೆಂಗಳೂರಿನ ಕೆಲವಡೆ ಇವತ್ತು ಕೂಡ ನೆಟ್ಟಗೆ ಇಂಟರ್ನೆಟ್ ಸಿಗ್ನಲ್ ಸಿಗಲ್ಲ. ಆದರೆ, ಜರ್ಮನಿಯಲ್ಲಿರುವ ಅಪರೂಪದ ಒಂದು ಕಲ್ಲಿನ ಬಳಿ ತೆರಳಿದರೇ ನಮಗೆ ಇಂಟರ್ನೆಟ್, ವೈಫೈ ಸಿಗ್ನಲ್ ಸಿಗುತ್ತದೆ. ಈ ಕಲ್ಲನ್ನು ಸುಟ್ಟರೇ ಇಂಟರ್ನೆಟ್ ಸಿಗ್ನಲ್ ಸಿಗಲು ಶುರುವಾಗುತ್ತದೆ. ಇದನ್ನು ನಿಜಕ್ಕೂ ನಂಬಲೇಬೇಕು.
ಅಂದ ಹಾಗೇ, ಇದು ನಿಜವಾದ ಕಲ್ಲಲ್ಲ.. ಸೈಂಟಿಸ್ಟ್ ಒಬ್ಬರು ಕೃತಕವಾಗಿ ನಿರ್ಮಿಸಿದ ಕಲ್ಲು. ಇದರಲ್ಲಿ ಥರ್ಮಲ್ ಎಲೆಕ್ಟ್ರಿಕ್ ಜನೆರೇಟರ್ ಅಳವಡಿಸಲಾಗಿದೆ. ಇದನ್ನು ಬೆಂಕಿಯ ಜ್ವಾಲೆ ಬಳಿ ಇಟ್ಟರೇ, ಆಸ ಶಾಖ ವಿದ್ಯುತ್ ಶಕ್ತಿಯಾಗಿ ಬದಲಾಗುತ್ತದೆ. ಆ ನಂತರ ವೈಫೈ ರೂಟರ್ ಆನ್ ಆಗುತ್ತದೆ.. ಇಂಟರ್ನೆಟ್ ಸಿಗ್ನಲ್ಸ್ ಆರಂಭವಾಗುತ್ತವೆ.
ಈ ಕೃತಕ ಕಲ್ಲಿನ ಭಾರ 1.4 ಟನ್.. ಈ ಕಲ್ಲನ್ನು ಕೀಪ್ ಅಲೈವ್ ಎಂದು ಕರೆಯುತ್ತಾರೆ. ಎರಾಮ್ ಬರ್ಟೋಲ್ ಎಂಬ ಸೈಂಟಿಸ್ಟ್ ಇದನ್ನು ತಯಾರು ಮಾಡಿದ್ದಾರೆ. ಇದನ್ನು ನೋಡಲು ಜನ ಮುಗಿಬೀಳುತ್ತಿದ್ದಾರೆ.
ADVERTISEMENT
ADVERTISEMENT