ADVERTISEMENT
ನಿನ್ನೆ ಸುರಿದ ಧಾರಾಕಾರ ಮಳೆಯ ಕಾರಣದಿಂದ ಐಪಿಎಲ್ ಫೈನಲ್ ಪಂದ್ಯ ಇವತ್ತಿಗೆ ಮುಂದೂಡಿಕೆಯಾಗಿದೆ. ಇವತ್ತು ರಾತ್ರಿ 7.30ಕ್ಕೆ ಅಹಮದಾಬಾದ್ನಲ್ಲಿ ಗುಜರಾತ್ ಟೈಟಾನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ 16ನೇ ಐಪಿಎಲ್ ಟ್ರೋಪಿ ಗೆಲ್ಲಲು ಮತ್ತೊಮ್ಮೆ ಮುಖಾಮುಖಿಯಾಗಲಿವೆ.
ಆದರೆ ಒಂದು ವೇಳೆ ಇವತ್ತೂ ಮಳೆಯಾಗಿ ಫೈನಲ್ ಪಂದ್ಯ ರದ್ದಾದರೆ ಆಗ ಯಾರಿಗೆ ಐಪಿಎಲ್ ಟ್ರೋಫಿ ಸಿಗಲಿದೆ..?
ಒಂದು ವೇಳೆ ಇವತ್ತೂ ಮಳೆಯಾಗಿ ಫೈನಲ್ ರದ್ದಾದರೆ ಆಗ ಗುಜರಾತ್ ಟೈಟನ್ಸ್ಗೆ ಐಪಿಎಲ್ ಟ್ರೋಫಿ ಸಿಗಲಿದೆ.
ಲೀಗ್ ಪಂದ್ಯದಲ್ಲಿ ಕ್ರಮಾಂಕದಲ್ಲಿ ಗುಜರಾತ್ ಮೊದಲ ಸ್ಥಾನದಲ್ಲಿದ್ದ ಕಾರಣ ಲೀಗ್ ಪಂದ್ಯದ ಕ್ರಮಾಂಕವನ್ನು ಆಧರಿಸಿ ಗುಜರಾತ್ನ್ನೇ ಐಪಿಎಲ್ ವಿಜೇತ ತಂಡ ಎಂದು ಘೋಷಿಸಲಾಗುತ್ತದೆ.
14 ಪಂದ್ಯಗಳಲ್ಲಿ 10ರಲ್ಲಿ ಗೆದ್ದಿದ್ದ ಗುಜರಾತ್ 20 ಅಂಕದೊಂದಿಗೆ ಮೊದಲ ಸ್ಥಾನದಲ್ಲಿದ್ರೆ, ಚೆನ್ನೈ 8 ಪಂದ್ಯಗಳನ್ನು ಗೆದ್ದು 17 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ.
16 ಐಪಿಎಲ್ ಸರಣಿಗಳ ಪೈಕಿ ಇದೇ ಮೊದಲ ಬಾರಿಗೆ ಐಪಿಎಲ್ ಫೈನಲ್ ಪಂದ್ಯ ಮೀಸಲಿಟ್ಟ ದಿನಕ್ಕೆ ಮುಂದೂಡಿಕೆಯಾಗಿದೆ.
ನಿನ್ನೆ ಫೈನಲ್ ಪಂದ್ಯಕ್ಕಾಗಿ ವಿತರಿಸಲಾಗಿದ್ದ ಟಿಕೆಟನ್ನೇ ಇವತ್ತು ಪಂದ್ಯ ವೀಕ್ಷಣೆಗೆ ಬಳಸಬಹುದು ಎಂದು ಐಪಿಎಲ್ ಆಡಳಿತ ಮಂಡಳಿ ಪ್ರೇಕ್ಷಕರಿಗೆ ಸೂಚಿಸಿದೆ.
ADVERTISEMENT