ಲೋಕಸಭಾ ಚುನಾವಣೆ ವೇಳೆ ಮತ್ತು ಐಪಿಎಲ್ ಪಂದ್ಯಾವಳಿ ವೇಳೆ ನಡೆದಿದ್ದ ಆನ್ಲೈನ್ ಬೆಟ್ಟಿಂಗ್ ಸಂಬಂಧ ಜಾರಿ ನಿರ್ದೇಶನಾಲಯ ದಾಳಿ ನಡೆಸಿದೆ.
ಅಕ್ರಮ ಹಣ ವರ್ಗಾವಣೆ ಸಂಬಂಧ ತನಿಖೆ ನಡೆಸುವ ಕೇಂದ್ರ ಸರ್ಕಾರದ ಸಂಸ್ಥೆ ಇವತ್ತು ಮುಂಬೈ ಮತ್ತು ಪುಣೆ ನಗರಗಳ 19 ಕಡೆಗಳಲ್ಲಿ ಶೋಧ ಕೈಗೊಂಡಿದೆ.
ಆನ್ಲೈನ್ ಬೆಟ್ಟಿಂಗ್ ನಡೆಸುವ the fairplay.io ಕಂಪನಿ ವಿರುದ್ಧ ದಾಳಿ ನಡೆದಿದೆ.
ಈ ವೇಳೆ ಅಪಾರ ಪ್ರಮಾಣದ ದಾಖಲೆಗಳು, ಡಿಮ್ಯಾಟ್ ಅಕೌಂಟ್ ದಾಖಲೆಗಳು, ಡಿಜಿಟಲ್ ಸಾಕ್ಷ್ಯಗಳು, ದುಬಾರಿ ಬೆಲೆಯ ವಾಚ್ಗಳು, ನಗದು ಒಳಗೊಂಡಂತೆ 8 ಕೋಟಿ ರೂಪಾಯಿ ಮೌಲ್ಯದ ಸಂಪತ್ತನ್ನು ಜಪ್ತಿ ಮಾಡಿಕೊಂಡಿರುವುದಾಗಿ ಜಾರಿ ನಿರ್ದೇಶನಾಲಯ ಹೇಳಿದೆ.
ADVERTISEMENT
ADVERTISEMENT