ಡಿಸೆಂಬರ್ 19ರಂದು ಐಪಿಎಲ್ ಆಟಗಾರರ ಹರಾಜು ಪ್ರಕ್ರಿಯೆ ನಡೆಯಲಿದೆ. ಈ ಹರಾಜಿನಲ್ಲಿ 77 ಮಂದಿ ಆಟಗಾರರನ್ನು ತಂಡಗಳು ಖರೀದಿ ಮಾಡಬಹುದು. ಇವರಲ್ಲಿ 30 ಮಂದಿ ವಿದೇಶಿ ಆಟಗಾರರ ಖರೀದಿಗೆ ಅವಕಾಶವಿದೆ.
ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಲು 1,666 ಮಂದಿ ಆಟಗಾರರು ನೋಂದಣಿ ಮಾಡಿಕೊಂಡಿದ್ದಾರೆ. 10 ಐಪಿಎಲ್ ತಂಡಗಳು ಒಟ್ಟು 262 ಕೋಟಿ 94 ಲಕ್ಷ ರೂಪಾಯಿ ಸುರಿದು ಆಟಗಾರರನ್ನು ಖರೀದಿಸಲು ಅವಕಾಶವಿದೆ.
ಏಕದಿನ ವಿಶ್ವಕಪ್ ಫೈನಲ್ನಲ್ಲಿ ಭಾರತದ ಸೋಲಿಗೆ ಕಾರಣರಾದ ಟ್ರಾವಿಸ್ ಹೆಡ್, ಪ್ಯಾಟ್ ಕಮ್ಮಿನ್ಸ್ ಮತ್ತು ಮಿಚೆಲ್ ಸ್ಟಾರ್ಕ್ ಅವರ ಹರಾಜಿನ ಮೂಲ ಬೆಲೆ 2 ಕೋಟಿ ರೂಪಾಯಿ ಇದೆ.
ಭಾರತ ಮೂಲದ ವೇಗಿ ಹರ್ಷಲ್ ಪಟೇಲ್ ಅವರ ಮೂಲ ಬೆಲೆಯೂ 2 ಕೋಟಿ ರೂಪಾಯಿ ಆಗಿದೆ.
ವಿಶ್ವಕಪ್ನಲ್ಲಿ ನ್ಯೂಜಿಲೆಂಡ್ ಪರ ಅಬ್ಬರಿಸಿದ ಭಾರತದ ಹಿನ್ನೆಲೆ ಇರುವ ರಚಿನ್ ರವೀಂದ್ರ ಅವರು ತಮ್ಮ ಮೂಲ ಬೆಲೆಯನ್ನು 50 ಲಕ್ಷ ರೂಪಾಯಿ ಎಂದು ಕಾಣಿಸಿದ್ದಾರೆ. ಹರಾಜಿನ ವೇಳೆ ಇವರ ಬೆಲೆ 15ರಿಂದ 20 ಪಟ್ಟು ಹೆಚ್ಚಳ ಆಗಬಹುದು ಎಂದು ಭಾವಿಸಲಾಗಿದೆ.
ಕೇದಾರ್ ಜಾಧವ್ ತಮ್ಮ ಮೂಲ ಬೆಲೆಯನ್ನು 2 ಕೋಟಿ ರೂಪಾಯಿ ಇಟ್ಟಿದ್ದಾರೆ. ವಿಶ್ವದ ಖ್ಯಾತ ಸ್ಪಿನ್ನರ್ ವಾನಿಂದು ಹಸರಂಗ ಮೂಲ ಬೆಲೆ 1.5 ಕೋಟಿ ರೂಪಾಯಿ.
ADVERTISEMENT
ADVERTISEMENT