ಐಪಿಎಸ್ ಅಧಿಕಾರಿ ರವಿ ಚನ್ನಣ್ಣನವರ್ ಭ್ರಷ್ಟಾಚಾರದ ಆರೋಪದ ವಿಚಾರವಾಗಿ ಮಾತನಾಡಿದ ಸಚಿವ ಶ್ರೀರಾಮುಲು ಐಪಿಎಸ್ ಅಧಿಕಾರಿ ರವಿ ಡಿ ಚನ್ನಣ್ಣನವರ್ ಪ್ರಾಮಾಣಿಕ ಅಧಿಕಾರಿ ಎಂದು ಹೇಳಿದ್ದಾರೆ.
ಬಳ್ಳಾರಿಯಲ್ಲಿ ಐಪಿಎಸ್ ಅಧಿಕಾರಿ ರವಿ ಚನ್ನಣ್ಣನವರ್ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರಜಾ ಪ್ರಭುತ್ವದಲ್ಲಿ ಆರೋಪಗಳು ಬರೋದು ಸಹಜ. ಅವರು ಬೆಳೆದುಬಂದ ಹಾದಿ, ಶಿಕ್ಷಣ ಪಡೆದ ರೀತಿ, ಅವರ ತಂದೆ ತಾಯಿ ಎಲ್ಲವನ್ನೂ ನಾನು ನೋಡಿದ್ದೇನೆ. ಆರೋಪಗಳು ಯಾರಿಗೂ ಬಿಟ್ಟಿಲ್ಲ. ರವಿ ಇಡೀ ರಾಜ್ಯದಲ್ಲಿ ಯುವಕರಿಗೆ ಮಾದರಿಯಾದ ವ್ಯಕ್ತಿ. ಆರೋಪಗಳು ಬಂದ ತಕ್ಷಣಾ ತಪ್ಪಿತಸ್ತ ಅನ್ನೋಕಾಗಲ್ಲ. ಅವರ ಬಗ್ಗೆ ಏನೇ ಆರೋಪ ಬಂದ್ರು ಅಷ್ಟೇ, ಅವರೊಬ್ಬ ಪ್ರಮಾಣಿಕ ಅಧಿಕಾರಿ ಎಂದು ಹೇಳಿದ್ದಾರೆ.
ಸಚಿವ ಆನಂದ್ ಸಿಂಗ್ ಹಾಗೂ ಡಿ.ಕೆ ಶಿವಕುಮಾರ್ ಭೇಟಿ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಆನಂದ್ ಸಿಂಗ್ ಹಾಗೂ ನಾನು ಆತ್ಮೀಯ ಸ್ನೇಹಿತರು. ಆನಂದ್ ಸಿಂಗ್ ದೂರ ದೃಷ್ಠಿ ಇರೋ ನಾಯಕರು. ಬೇರೆ ಬೇರೆ ಕಾರಣಕ್ಕೂ ಡಿಕೆ ಶಿವಕುಮಾರನ್ನ ಮೀಟ್ ಆಗಿರಬಹುದಷ್ಟೇ. ಅವರ ಮೇಲೆ ನನಗೆ ಪೂರ್ಣ ನಂಬಿಕೆ ಇದೆ. ಅವರು ದೂರ ಹೋಗೋದಾದ್ರೆ ನೇರಾ ನೇರಾ ಹೇಳುವಂತ ವ್ಯಕ್ತಿ, ಅವರು ಮೋಸ ಮಾಡುವಂತಹ ವ್ಯಕ್ತಿ ಅಲ್ಲ. 2023 ಚುನಾವಣೆಯಲ್ಲಿ ಅವರ ನೇತೃತ್ವದಲಲ್ಲೇ ಚುನಾವಣೆ ಮಾಡ್ತೀವಿ. ಅವರು ನಾವು ಒಟ್ಟಾಗಿ ಅಖಂಡ ಬಳ್ಳಾರಿ ಜಿಲ್ಲೆಯನ್ನ ಅಭಿವೃದ್ದಿ ಮಾಡುತ್ತೇವೆ ಎಂದು ಹೇಳಿದ್ದಾರೆ.
ಐಪಿಎಸ್ ಅಧಿಕಾರಿ ರವಿ ಡಿ ಚನ್ನಣ್ಣನವರ್ ಮೇಲೆ ಸಾಮಾಜಿಕ ಜಾಲತಾಣಗಳಲ್ಲಿ ಅಕ್ರಮದ ಆಸ್ತಿ ಬಗ್ಗೆ ಹಲವಾರು ಆರೋಪಗಳು ಬರುತ್ತಿವೆ. ಈ ಬಗ್ಗೆ ಸೋಮವಾರ ಮಾಧ್ಯಮ ಪ್ರಕಟಣೆ ಹೊರಡಿಸಿದ್ದ ಅಧಿಕಾರಿ ರವಿಯವರು, ಸಾಮಾಜಿಕ ಜಾಲತಾಣದ ಮೂಲಕ ಅಸತ್ಯವನ್ನ ಹೇಳಲಾಗುತ್ತಿದೆ. ಉದ್ದೇಶಪೂರಿತವಾಗಿ ನನ್ನ ತೇಜೋವಧೆ ಮಾಡಲಾಗುತ್ತಿದೆ. ಅಂತವರ ಮೇಲೆ ಮಾನನಷ್ಠ ಮೊಕದ್ದಮೆ ಕೇಸ್ ಹಾಕಿದ್ದೇನೆ ಎಂದು ಹೇಳಿದ್ದರು. ಈ ಬೆನ್ನಲ್ಲೇ,ಸಚಿವ ಶ್ರೀರಾಮುಲು ಅವರು ಹೇಳಿಕೆ ನೀಡಿದ್ದಾರೆ.