ದೇಶದ ಪ್ರಧಾನಮಂತ್ರಿ ಅಮಿತ್ ಶಾ, ಗೃಹ ಮಂತ್ರಿ ನರೇಂದ್ರ ಮೋದಿ.. ಹೀಗೆ ದೇಶದ ಅತ್ಯುನ್ನತ ಸ್ಥಾನಗಳಲ್ಲಿರುವ ವ್ಯಕ್ತಿಗಳ ಪದವಿಗಳ ಬಗ್ಗೆ ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾಸ್ ಶರ್ಮಾ ತಪ್ಪಾಗಿ ಪ್ರಸ್ತಾಪ ಮಾಡಿದ್ದಾರೆ. ಗುವಾಹಟಿಯಲ್ಲಿ ನಡೆದ ಬಹಿರಂಗ ಸಮಾವೇಶದಲ್ಲಿ ಹಿಮಂತ್ ಬಿಸ್ವಾಸ್ ಶರ್ಮಾ ಹೀಗೆ ಬಾಯಿ ತಪ್ಪಿದ್ದಾರೆ.
ಹಿಮಂತ್ ಬಿಸ್ವಾಸ್ ಶರ್ಮಾ ಹೇಳಿಕೆಯಿಂದ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವಿಡಿಯೋವನ್ನು ಶೇರ್ ಮಾಡಿರುವ ಕಾಂಗ್ರೆಸ್ ಟ್ವಿಟ್ಟರ್ನಲ್ಲಿ ಬಿಜೆಪಿಗೆ ಚುರುಕು ಮುಟ್ಟಿಸಲು ನೋಡಿದೆ. ಅಧಿಕಾರ ಪಕ್ಷ ಹೊಸ ಪ್ರಧಾನಿಯನ್ನು ಆಯ್ಕೆ ಮಾಡಿತಾ ಹೇಗೆ..? ಪ್ರಶ್ನಿಸಿದೆ.
ಈ ಹಿಂದೆ ಸರ್ಬಾನಂದ್ ಸೋನಾವಲ್ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಓರ್ವ ಸಂಸದ ಮಾತನಾಡುತ್ತಾ, ಹಿಮಂತ್ ಬಿಸ್ವಾಸ್ ಶರ್ಮಾರನ್ನು ಮುಖ್ಯಮಂತ್ರಿ ಎಂದು ಹೇಳಿಕೆ ನೀಡಿದ್ದರು. ಇದೇ ರೀತಿಯ ಹೇಳಿಕೆಗಳು ಹಲವಾರು ಬಾರಿ ಪುನರಾವರ್ತನೆಗೊಂಡಿದ್ದವು. ಆಗ ವಾಸ್ತವವಾಗಿ ಹಿಮಂತ್ ಬಿಸ್ವಾಸ್ ಶರ್ಮಾ ಮಂತ್ರಿ ಆಗಿದ್ದರು. ನಂತರ ನಡೆದ ಚುನಾವಣೆಯಲ್ಲಿ ಬಿಜೆಪಿ ಗೆದ್ದಾಗ ಹೈಕಮಾಂಡ್, ಹಿಮಂತ್ ಬಿಸ್ವಾಸ್ ಶರ್ಮಾರನ್ನೇ ಮುಖ್ಯಮಂತ್ರಿ ಆಗಿ ಆಯ್ಕೆ ಮಾಡಿತ್ತು.
ಇದೇ ವಿಚಾರವನ್ನು ಕಾಂಗ್ರೆಸ್ ಈಗ ಪ್ರಸ್ತಾಪಿಸಿದೆ. ಬಿಜೆಪಿ ಈಗಲೇ ತನ್ನ ಮುಂದಿನ ಪ್ರಧಾನಿಯನ್ನು ನಿರ್ಣಯಿಸಿದೆಯಾ ಎಂದು ಪ್ರಶ್ನೆ ಮಾಡಿದೆ.
ಆದರೆ, ಇದು ಆಕಸ್ಮಾತ್ ಆಗಿ ಹೊರಬಿದ್ದ ಮಾತು ಎಂದು ಬಿಜೆಪಿ ಸಬೂಬು ಹೇಳುತ್ತಿದೆ. ಇದಕ್ಕೂ ಕೌಂಟರ್ ಕೊಟ್ಟಿರುವ ಕಾಂಗ್ರೆಸ್, ಆಗಲು ನಿಮ್ಮ ಸಂಸದ ಬಾಯಿ ತಪ್ಪಿ ಹೇಳಿದ್ದು ಎಂದು ನಮಗನಿಸುತ್ತಿಲ್ಲ ಎಂದಿದೆ.