ಇಸ್ರೇಲ್ ಮತ್ತು ಪ್ಯಾಲೆಸ್ತಿನ್ ನಡುವಿನ ಯುದ್ಧದ ನಡುವೆಯೇ ಅರಬ್ಬಿ ಸಮುದ್ರದಲ್ಲಿ ಇಸ್ರೇಲ್ಗೆ ಸೇರಿದ ವ್ಯಾಪಾರಿ ಹಡಗಿನ ಮೇಲೆ ವೈಮಾನಿಕ ದಾಳಿ ನಡೆಸಲಾಗಿದೆ.
ಅರಬ್ಬಿ ಸಮುದ್ರದ ಭಾರತದ ಪಶ್ಚಿಮ ಕರಾವಳಿಯಲ್ಲಿ ದಾಳಿ ನಡೆದಿದೆ ಎಂದು ಬ್ರಿಟನ್ ಮೂಲದ ಜಲಭದ್ರತೆ ಸಂಸ್ಥೆ ಆ್ಯಂಬ್ರೆ ಹೇಳಿದೆ.
ಭಾರತದ ವಾಯುವ್ಯ ಭಾಗಕ್ಕಿಂತ 200 ಕಿಲೋ ಮೀಟರ್ ದೂರದಲ್ಲಿ ದಾಳಿ ನಡೆದಿದೆ. ರಾಸಾಯನಿಕಗಳನ್ನು ಸಾಗಿಸುತ್ತಿದ್ದ ಹಡಗಿಗೆ ಹೊತ್ತಿ ಉರಿದಿದ್ದು, ಬೆಂಕಿ ನಂದಿಸಲಾಗಿದೆ. ಯಾವುದೇ ಸಾವು-ನೋವು ಸಂಭವಿಸಿಲ್ಲ.
ದಾಳಿಗೂ ಮೊದಲು ಕೊನೆಯಾದಾಗಿ ಈ ಹಡಗು ಸೌದಿ ಅರೇಬಿಯಾ ಜೊತೆಗೆ ಸಂಪರ್ಕ ಸಾಧಿಸಿತ್ತು ಮತ್ತು ಭಾರತದತ್ತ ಹೊರಟ್ಟಿತ್ತು.
ಇಸ್ರೇಲ್-ಪ್ಯಾಲೆಸ್ತೇನ್ ಯುದ್ಧ ಶುರುವಾದ ಬಳಿಕ ಇರಾನ್ ಬೆಂಬಲಿತ ಹೌಥಿಸ್ ಸಂಘಟನೆ ಕೆಂಪು ಸಮುದ್ರದಲ್ಲಿ ವೈಮಾನಿಕ ಮತ್ತು ಕ್ಷಿಪಣಿ ದಾಳಿಗಳನ್ನು ನಡೆಸಿತ್ತು. ಈ ದಾಳಿಯ ಬಳಿಕ ವ್ಯಾಪಾರಿ ಹಡಗುಗಳು ತಮ್ಮ ಮಾರ್ಗ ಬದಲಾವಣೆ ಮಾಡಿದ್ದವು.