ಮಹಾರಾಷ್ಟ್ರದ ಜಲ್ನಾದಲ್ಲಿ ಆದಾಯ ತೆರಿಗೆ ಇಲಾಖೆ (Income Tax Department) ನಡೆಸಿದ ದಾಳಿಯಲ್ಲಿ 390 ಕೋಟಿ ರೂಪಾಯಿ ಮೌಲ್ಯದ ಬೇನಾಮಿ ಆಸ್ತಿಯನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಆದಾಯ ತೆರಿಗೆ ಇಲಾಖೆ ಹೇಳಿದೆ.
ಶೋಧದ ವೇಳೆ 56 ಕೋಟಿ ರೂಪಾಯಿ ಮೊತ್ತದ ನಗದು (Cash), 32 ಕೆಜಿಯಷ್ಟು ಚಿನ್ನ (Gold) ಹಾಗೂ 14 ಕೋಟಿ ರೂಪಾಯಿ ಮೌಲ್ಯದ ಮುತ್ತು ಮತ್ತು ವಜ್ರವನ್ನು (Pearl and Diamond) ವಶಪಡಿಸಿಕೊಳ್ಳಲಾಗಿದೆ.
ಜಲ್ನಾದಲ್ಲಿ ಆಗಸ್ಟ್ 1ರಿಂದ 8ರ ನಡುವೆ ಹಲವು ಉದ್ಯಮಿಗಳ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿತ್ತು.
ದುಡ್ಡು ಎಣಿಸುತ್ತಿರುವ ವೀಡಿಯೋ ನೋಡಿ:
महाराष्ट्र : जालना में स्टील कारोबारियों के ठिकानों पर IT विभाग के छापे
◆390 करोड़ की बेनामी संपत्ति ज़ब्त, 58 करोड़ कैश व 52 किलो सोना बरामद pic.twitter.com/ioaFUCYXhX
— News24 (@news24tvchannel) August 11, 2022
ಸ್ಟೀಲ್, ಬಟ್ಟೆ ವ್ಯಾಪಾರಿಗಳು ಮತ್ತು ರಿಯಲ್ ಎಸ್ಟೇಟ್ ಉದ್ಯಮಿಗಳ ಮನೆ, ಕಚೇರಿಗಳ ಮೇಲೆ ಹುಡುಕಾಟ ನಡೆದಿತ್ತು.
ವಶಪಡಿಸಿಕೊಳ್ಳಲಾದ 56 ಕೋಟಿ ರೂಪಾಯಿ ಮೊತ್ತದ ನಗದು ಎಣಿಕೆಗೆ ಐಟಿ ಅಧಿಕಾರಿಗಳಿಗೆ 13 ಗಂಟೆ ಬೇಕಾಯಿತು.
ಇದನ್ನೂ ಓದಿ:
Govt Jobs: ಕರ್ನಾಟಕದಲ್ಲಿ ಎಷ್ಟು ಸರ್ಕಾರಿ ಹುದ್ದೆಗಳು ಖಾಲಿ ಇವೆ ಗೊತ್ತಾ..?