ಬಿಜೆಪಿಗರು ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರವನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದು. ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಸೋಲಿಸುವ ಶಪಥ ಮಾಡಿದ್ದರು. ಅಮಿತ್ ಶಾ ಅವರಿಂದ ಹಿಡಿದು ಘಟಾನುಘಟಿ ನಾಯಕರೆಲ್ಲಾ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದಲ್ಲಿ ಮೊಕ್ಕಾಂ ಹೂಡಿ ಶೆಟ್ಟರ್ ವಿರುದ್ಧ ರಣತಂತ್ರ ರೂಪಿಸಿದ್ದರು.
ಆದರೆ, ಮತದಾನದ ದಿನವಾದ ಇಂದು ಎಂದು ಬೆಳಗಾವಿಯ ಬಿಜೆಪಿ ಸಂಸದೆ ಮಂಗಳಾ ಅಂಗಡಿ ಶಾಕಿಂಗ್ ಸ್ಟೇಟ್ಮೆಂಟ್ ನೀಡಿದ್ದಾರೆ. ಹುಬ್ಬಳ್ಳಿ ಧಾರವಾಡ ಸೆಂಟ್ರಲ್ನಲ್ಲಿ ಜಗದೀಶ್ ಶೆಟ್ಟರ್ ಗೆಲ್ಲುತ್ತಾರೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.
ಬೆಳಗಾವಿಯಲ್ಲಿ ಮತದಾನದ ನಂತರ ಮಾತನಾಡಿದ ಮಂಗಳಾ ಅಂಗಡಿ, ಹುಬ್ಬಳ್ಳಿಯಲ್ಲಿ ಜಗದೀಶ್ ಶೆಟ್ಟರ್ ಗೆಲ್ಲುತ್ತಾರೆ. ಆದರೆ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬರುತ್ತದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.
ಬೆಳಗಾವಿಯಲ್ಲಿ ಕನಿಷ್ಠ 13 ಸ್ಥಾನಗಳನ್ನು ಬಿಜೆಪಿ ಗೆಲ್ಲಲಿದೆ.. ರಾಜ್ಯದಲ್ಲಿ ಬಿಜೆಪಿ ಪರ ಅಲೆ ಇದೆ ಎಂದರು. ನಿಮ್ಮ ಬೀಗರಾದ ಶೆಟ್ಟರ್ ಅವರ ಬಗ್ಗೆ ಹೇಳಿ ಎಂದಾಗ, ಅದು ಹುಬ್ಬಳ್ಳಿ ರಾಜಕಾರಣ ಅಲ್ಲಿ ಶೆಟ್ಟರ್ ಅವರೇ ಗೆಲ್ಲೋದು ಎಂದರು.