ಜೈನ ಮುನಿ (Jain Monk) ಕಾಮಕುಮಾರ ನಂದಿ ಮಹಾರಾಜರ (Kamakumara Nandi Maharaja) ಭೀಭತ್ಸ ಹತ್ಯೆಗೆ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಖಂಡನೆ ವ್ಯಕ್ತಪಡಿಸಿದೆ.
ಬೆಳಗಾವಿ (Belagavi) ಜಿಲ್ಲೆಯ ಚಿಕ್ಕೋಡಿಯಲ್ಲಿ (Chikkodi) ಹಣಕಾಸು ವೈಷಮ್ಯದ ಕಾರಣದಿಂದ ಆಪ್ತನಾಗಿದ್ದ ನಾರಾಯಣ ಮಾಳಿ ಎಂಬಾತ ಜೈನ ಮುನಿಗಳನ್ನು ಕೊಲೆಗೈದು ಬಳಿಕ ಹಸನ್ ಡಲಾಯತ್ನ ಸಹಾಯದಿಂದ ಕತ್ತರಿಸಿ ಖಾಲಿ ಬೋರ್ವೆಲ್ನಲ್ಲಿ ಬಿಸಾಕಿದ್ದ.
ಬ್ರಾಹ್ಮಣ ಮಹಾಸಭಾ ಹೇಳಿದ್ದೇನು..?
ಬದುಕಿ, ಬದುಕಲು ಬಿಡಿ ಎಂಬ ತತ್ವದ ಮೂಲಕ ಜಗತ್ತಿಗೆ ಅಹಿಂಸೆ ಮತ್ತು ಶಾಂತಿ ಬೋಧಿಸಿದ ಜೈನ ಮತ ಪ್ರಾಣಿ ಮತ್ತು ಪಕ್ಷಿಗಳಾದಿಯಾಗಿ ಜೀವರಾಶಿಗಳಿಗೆ ತೊಂದರೆ ಬಯಸದ ಆದರ್ಶ ಮತವಾಗಿದೆ.
ಇಂತಹ ಉತ್ಕೃಷ್ಟವಾದ ತತ್ವಗಳನ್ನು ಜೀವನಪರ್ಯಂತ ಮಹಾವ್ರತದಂತೆ ಪಾಲಿಸುವ ಜೈನ ಮುನಿಗಳೆಡೆಗೆ ಸಮಾಜದಲ್ಲಿ ಅತ್ಯಂತ ಗೌರವಾದರಗಳಿರತಕ್ಕದ್ದು. ಆದರೆ ಬೆಳಗಾವಿಯಲ್ಲಿ ಚಿಕ್ಕೋಡಿಯಲ್ಲಿ ಜೈನ ಮುನಿ ಶ್ರೀ ಕಾಮಕುಮಾರ ನಂದಿ ಮಹಾರಾಜರ ಭೀಬತ್ಸ ಹತ್ಯೆ ನಾಗರಿಕ ಸಮಾಜ ತಲೆತಗ್ಗಿಸುವ ಹೇಯ ಕೃತ್ಯವಾಗಿದೆಯಷ್ಟೇ ಅಲ್ಲದೇ ಇಂತಹ ಹೇಯ ಕೃತ್ಯವನ್ನು ಬ್ರಾಹ್ಮಣ ಸಮಾಜ ಖಂಡಿಸುತ್ತದೆ.
ಜೈನ ಮುನಿ ಶ್ರೀ ಕಾಮಕುಮಾರ ನಂದಿ ಮಹಾರಾಜರ ಹತ್ಯೆ ಮಾಡಿದ ದುಷ್ಕರ್ಮಿಗಳು ಕಠಿಣ ಶಿಕ್ಷೆಯಾಗುವ ನಿಟ್ಟಿನಲ್ಲಿ ಸರ್ಕಾರ ತೀಕ್ಷ್ಣ ಕ್ರಮಕೈಗೊಳ್ಳಬೇಕು. ತನ್ಮೂಲಕ ರಾಜ್ಯದಲ್ಲಿ ಕಾನೂನಿನಲ್ಲಿ ಭಯ ಇಲ್ಲದೇ ಹತ್ಯೆಗಳನ್ನು ಮಾಡುವ ದುಷ್ಕರ್ಮಿಗಳ ಕೃತ್ಯಗಳಿಗೆ ಕಡಿವಾಣ ಹಾಕಬೇಕು
ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಅಶೋಕ್ ಹಾರನಹಳ್ಳಿಯವರು ಆಗ್ರಹಿಸಿದ್ದಾರೆ.
ADVERTISEMENT
ADVERTISEMENT