ನಮ್ಮನ್ನಗಲಿದ ಅಪ್ಪು ಅವರ ಜೇಮ್ಸ್ ಸಿನಿಮಾ ಥಿಯೇಟರ್ಗಳಲ್ಲಿ ಮತ್ತೆ ಬಿಡುಗಡೆ ಆಗುತ್ತಿದೆ. ಅದೂ ಅಪ್ಪು ಅವರ ಧ್ವನಿಯಲ್ಲೇ. ಹೌದು ಇದೇ ಏಪ್ರಿಲ್ 22ರಂದು ಅಂದರೆ ಶುಕ್ರವಾರದಂದು ಅಪ್ಪು ಅವರ ಧ್ವನಿಯಲ್ಲೇ ಜೇಮ್ಸ್ 50ರಿಂದ 60 ಥಿಯೇಟರ್ಗಳಲ್ಲಿ ಮರು ಬಿಡುಗಡೆ ಆಗುತ್ತಿದೆ.
ಅಪ್ಪು ಅವರ ಧ್ವನಿಯನ್ನು ಮರು ಸೃಷ್ಟಿಸಲಾಗಿದೆ. ಹೈದರಾಬಾದ್ ಮೂಲದ ಧ್ವನಿ ತಂತ್ರಜ್ಞರ 25 ಮಂದಿಯ ತಂಡ ಅಪ್ಪು ಅವರ ಧ್ವನಿಯನ್ನು ಮರು ಸೃಷ್ಟಿ ಮಾಡಿದೆ. ಇದಕ್ಕಾಗಿ ಪ್ರಭಾಸ್ ನಟನೆಯ ಆದಿಪುರುಷ ಸಿನಿಮಾದ ಕೆಲಸವನ್ನೂ ನಿಲ್ಲಿಸಿ ತಂಡ ಜೇಮ್ಸ್ಗಾಗಿ ಕೆಲಸ ಮಾಡಿತ್ತು.
ನಾಯಕ ನಟನ ಧ್ವನಿ ಮರು ಸೃಷ್ಟಿಯ ಇಂಥದ್ದೊAದು ಪ್ರಯತ್ನ ನಡೆದಿರುವುದು ಇಡೀ ವಿಶ್ವದಲ್ಲೇ ಇದೇ ಮೊದಲು. ಮೊದಲ ಬಾರಿಗೆ ಈ ತಂತ್ರಜ್ಞಾನ ಬಳಸಲಾಗಿದೆ ಎಂದು ನಿರ್ಮಾಪಕ ಕಿಶೋರ್ ಹೇಳಿದ್ದಾರೆ.