ಜಮ್ಮು, ಶ್ರೀನಗರ ಭಾಗದಲ್ಲಿ ಭಾರಿ ಮಳೆ ಹಾಗೂ ಹಿಮಪಾತವಾಗುತ್ತಿದ್ದು, ದೇಶದ ಪ್ರಮುಖ ನಗರಗಳನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೂಕುಸಿತ ಉಂಟಾಗಿದೆ.
ರಾ.ಹೆದ್ದಾರಿ 44ರಲ್ಲಿ ಭಾರಿ ಭೂಕುಸಿತ ಉಂಟಾಗಿದ್ದು ಜಮ್ಮು ಶ್ರೀನಗರ ಹೈವೆ ಸಂಪೂರ್ಣ ಬಂದ್ ಆಗಿದೆ. ಗುಡ್ಡ ಜರಿದ ಪರಿಣಾಮ ಭಾರಿ ಪ್ರಮಾಣದ ಮಣ್ಣು ರಸ್ತೆಗೆ ಬಿದ್ದಿದ್ದು ವಾಹನ ಸಂಚಾರ ಅಸಾಧ್ಯವಾಗಿದೆ. ಹವಾಮಾನ ಇಲಾಖೆ ಈ ವಾರಿ ಕಾಶ್ಮೀರ ಕಣಿವೆ ಭಾಗದಲ್ಲಿ ಸಾಧಾರಣ ಮಳೆಯಾಗುವ ಹಾಗೂ ಹಿಮಪಾತವಾಗುವ ಮುನ್ಸೂಚನೆ ನೀಡಿತ್ತು ಅದರಂತೆ, ಮಳೆ ಮುಂದುವರೆದಿದ್ದು ಹೆದ್ದಾರಿ 44ರಲ್ಲಿ ಗುಡ್ಡ ಕುಸಿತ ಉಂಟಾಗಿದೆ.