ಬೆನ್ನುಮೂಳೆ ನೋವಿನಿಂದ ಭಾರತ ಕ್ರಿಕೆಟ್ ತಂಡದ ಪ್ರಮುಖ ಬೌಲರ್ ಜಸ್ಪ್ರಿತ್ ಬುಮ್ರಾ (Jasprit Bumra) ಅವರನ್ನು ಮುಂದಿನ ಟಿ20 ವಿಶ್ವಕಪ್ನಿಂದ (T20 World Cup) ಹೊರಗಿಡಲಾಗಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. ಇವರ ಸ್ಥಾನಕ್ಕೆ ವೇಗಿ ಮೊಹಮ್ಮದ್ ಸಿರಾಜ್ ಎಂಟ್ರಿ ಕೊಡಲಿದ್ದಾರೆ ಎನ್ನುವ ಬಗ್ಗೆ ತಿಳಿದುಬಂದಿದೆ.
ಬೆನ್ನು ಮೂಳೆ ನೋವಿನಿಂದ ಜಸ್ಪ್ರಿತ್ ಬುಮ್ರಾ (Jasprit Bumra) ರನ್ನು ಈ ವರ್ಷದ ಏಷ್ಯಾಕಪ್ನಿಂದ ಹೊರಗಿಡಲಾಗಿತ್ತು. ಇದೀಗ, ಟಿ20 ವಿಶ್ವಕಪ್ಗೂ ಅವರು ಹೊರಗುಳಿಯಲಿದ್ದಾರೆ.
ಇದನ್ನೂ ಓದಿ : Umesh Yadav : ಟಿ20 ಸರಣಿಯಿಂದ ಶಮಿಗೆ ಗೇಟ್ಪಾಸ್ – ಉಮೇಶ್ ಯಾದವ್ಗೆ ಸ್ಥಾನ
ನಿನ್ನೆ ಗುರುವಾರ ನಡೆದಿದ್ದ ಭಾರತ ಹಾಗೂ ದ.ಆಫ್ರಿಕಾದ ನಡುವಿನ ಟಿ20 ಪಂದ್ಯದಿಂದ ಅವರನ್ನು ಏಕಾಏಕಿ ಕೈಬಿಡಲಾಗಿತ್ತು.
ಟಿ20 ವಿಶ್ವಕಪ್ ಇದೇ ಅಕ್ಟೋಬರ್ 16ರಿಂದ ಆರಂಭವಾಗಲಿದೆ. ನವೆಂಬರ್ 13 ರಂದು ಅಂತಿ ಪಂದ್ಯ ನಡೆಯಲಿದೆ.