ADVERTISEMENT
ಲೋಕಸಭಾ ಚುನಾವಣೆಗೆ (Loksabha Election) ಬಿಜೆಪಿ (BJP) ನೇತೃತ್ವದ ಎನ್ಡಿಎ (NDA) ಒಕ್ಕೂಟದ ವಿರುದ್ಧ ರೂಪುಗೊಳ್ಳುತ್ತಿರುವ ವಿರೋಧ ಪಕ್ಷಗಳ ಸಭೆ ಬೆಂಗಳೂರಲ್ಲಿ (Bengaluru Meet) ನಡೆಯಲಿದೆ.
ಜುಲೈ 17 ಮತ್ತು 18ರಂದು ಎರಡು ದಿನ ಬೆಂಗಳೂರಲ್ಲಿ ನಡೆಯಲಿರುವ ವಿಪಕ್ಷಗಳ ಸಭೆಗೆ ಕರ್ನಾಟಕದ ಪ್ರಾದೇಶಿಕ ಪಕ್ಷ ಜೆಡಿಎಸ್ನ್ನು (JDS) ಆಹ್ವಾನಿಸಿಲ್ಲ.
ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ (H D Kumarswamy) ಅವರು ತಮ್ಮ ಪಕ್ಷ ಜೆಡಿಎಸ್ನ್ನು (JDS) ಬಿಜೆಪಿಯಲ್ಲಿಯೇ ವಿಲೀನಗೊಳಿಸಬಹುದು ಅಥವಾ ಲೋಕಸಭಾ ಚುನಾವಣೆಗೆ ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಳ್ಳಬಹುದು ಎಂಬ ಕಾರಣದ ಹಿನ್ನೆಲೆಯಲ್ಲಿ ಜೆಡಿಎಸ್ಗೆ ಆಹ್ವಾನ ನೀಡಿಲ್ಲ.
ಬಿಹಾರ ರಾಜಧಾನಿ ಪಾಟ್ನಾದಲ್ಲಿ (Patna Meet) ನಡೆದಿದ್ದ ಮೊದಲ ಸಭೆಯಲ್ಲಿ 16 ವಿರೋಧ ಪಕ್ಷಗಳು ಭಾಗವಹಿಸಿದ್ದವು. ಬೆಂಗಳೂರಿನ ಸಭೆಗೆ ಉಳಿದ 8 ಪಕ್ಷಗಳು ಭಾಗವಹಿಸಲಿವೆ. ಆಮ್ ಆದ್ಮಿ ಪಕ್ಷಕ್ಕೂ ಬೆಂಗಳೂರಿನ ಸಭೆಗೆ ಆಹ್ವಾನ ನೀಡಲಾಗಿದೆ. ಈ ಮೂಲಕ ವಿಪಕ್ಷಗಳ ಸಭೆಯಲ್ಲಿ ಭಾಗವಹಿಸಲಿರುವ ಪಕ್ಷಗಳ ಸಂಖ್ಯೆ 24ಕ್ಕೆ ಏರಿಕೆ ಆಗಲಿದೆ,
ಕೇರಳ ಕಾಂಗ್ರೆಸ್ (ಜೋಸೆಫ್), ಕೇರಳ ಕಾಂಗ್ರೆಸ್ (ಮಣಿ), ಎಂಡಿಎಂಕೆ, ಕೆಡಿಎಂಕೆ, ವಿಸಿಕೆ, ಆರ್ಎಸ್ಪಿ, ಫಾರ್ವಡ್ ಬ್ಲಾಕ್ ಮತ್ತು ಮುಸ್ಲಿಂ ಲೀಗ್ ಹಾಗೂ ಆಮ್ ಆದ್ಮಿ ಪಕ್ಷಗಳು ಬೆಂಗಳೂರಿನ ಸಭೆಯಲ್ಲಿ ಭಾಗವಹಿಸಲಿವೆ.
ADVERTISEMENT