ಜಾರ್ಖಾಂಡನಲ್ಲಿ ಇಂದು ದೊಡ್ಡ ರಾಜಕೀಯ ವಿದ್ಯಮಾನ ನಡೆಯುವ ಮುನ್ಸೂಚನೆ ಕಂಡುಬರುತ್ತಿದೆ. ಇತ್ತೀಚೆನ ಬೆಳವಣಿಗೆಯಲ್ಲಿ ಬಿಜೆಪಿಯ ‘ಅಪರೇಷನ್ ಕಮಲ’ (Operation Lotus) ಭಯದಿಂದ ಕಾಂಗ್ರೆಸ್ ಹಾಗೂ ಜೆಎಮ್ಎಮ್ ಪಕ್ಷಗಳು ತಮ್ಮ ಶಾಸಕರನ್ನು ರೆಸಾರ್ಟ್ಗೆ ಸ್ಥಳಾಂತರಿಸಲು ನಿರ್ಧರಿಸಿವೆ.
ಜಾರ್ಖಾಂಡ್ ಮುಖ್ಯಮಂತ್ರಿ ಹೇಮಂತ್ ಸೋರೇನ್ ಅವರ ಶಾಸಕತ್ವ ಸ್ಥಾನ ರದ್ದು ಮಾಡಿ ಕೇಂದ್ರ ಚುನಾವಣಾ ಆಯೋಗ ರಾಜ್ಯಪಾಲರಿಗೆ ವರದಿ ನೀಡಿದೆ ಎಂದು ಹೇಳಲಾಗಿದೆ. ಇಂದು ರಾಜ್ಯಪಾಲರಾದ ರಮೇಶ್ ಬೈಸ್ ಈ ವರದಿಯನ್ನು ಸ್ವೀಕರಿಸಿ ಅಂಗೀಕರಿಸುವ ಸಾಧ್ಯತೆ ಇದೆ. ರಾಜ್ಯಪಾಲರು ಈ ವರದಿಗೆ ಅಂಕಿತ ಹಾಕಿದರೆ ಮುಖ್ಯಮಂತ್ರಿ ಹೇಮಂತ್ ಸೋರೆನ್ರ ಖುರ್ಚಿಗೆ ಕುತ್ತು ಬರಲಿದೆ.
ಇದನ್ನೂ ಓದಿ : BIG BREAKING: ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಶಾಸಕತ್ವ ರದ್ದು – CM ಸ್ಥಾನಕ್ಕೆ ರಾಜೀನಾಮೆ ಅನಿವಾರ್ಯ
ಈ ಹಿನ್ನೆಲೆಯಲ್ಲಿ ಜಾರ್ಖಾಂಡ್ ಮುಕ್ತಿ ಮೋರ್ಚಾ (ಜೆಎಮ್ಎಮ್) ಪಕ್ಷದ ನಾಯಕ ಹಾಗೂ ಮುಕ್ಯಮಂತ್ರಿ ಹಾಗೂ ಕಾಂಗ್ರೆಸ್ ಪಕ್ಷದ ನಾಯಕ ಸಭೆ ನಡೆಸಿದ್ದಾರೆ. ಅಪರೇಷನ್ ಕಮಲದ ಭಯ ಇರುವುದರಿಂದ (Operation Lotus) ಈ ಸಭೆಯಲ್ಲಿ ತಮ್ಮ ತಮ್ಮ ಶಾಸಕರನ್ನು ಹಿಡಿದಿಟ್ಟುಕೊಳ್ಳುವ ಸಲುವಾಗಿ ಶಾಸಕರನ್ನು ರೆಸಾರ್ಟ್ಗೆ ಕಳುಹಿಸಲು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.