ಜಾನ್ಸನ್ ಆ್ಯಂಡ್ ಜಾನ್ಸನ್ (Johnson And Johnson) ಕಂಪೆನಿ 2023 ರಿಂದ ತಾನು ಮಾರಾಟ ಮಾಡುತ್ತಿದ್ದ ಮಕ್ಕಳ ಪೌಡರ್ ನ ಉತ್ಪಾದನೆಯನ್ನು ಜಾಗತಿಕವಾಗಿ ನಿಲ್ಲಿಸಿದೆ.
ಹಲವು ಕಾನೂನು ಪ್ರಕರಣಗಳನ್ನು ಮತ್ತು ಕೆನಡಾ ಹಾಗೂ ಅಮೇರಿಕಾದಲ್ಲಿ ನಿಷೇಧಕ್ಕೊಳಗಾದ ನಂತರ ಜಾನ್ಸನ್ ಆ್ಯಂಡ್ ಜಾನ್ಸನ್ (Johnson And Johnson) ಕಂಪೆನಿ ಈ ನಿರ್ಧಾರ ತೆಗೆದುಕೊಂಡಿದೆ.
ಗುರುವಾರ ಈ ಬಗ್ಗೆ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಜಾನ್ಸನ್ ಆ್ಯಂಡ್ ಜಾನ್ಸನ್ ಕಂಪೆನಿ, ವ್ಯಾವಹಾರಿಕ ಕಾರಣದಿಂದಾಗಿ ಮಕ್ಕಳ ಟಾಲ್ಕಮ್ ಪೌಡರ್ ಉತ್ಪದಾನೆ ಹಾಗೂ ಮಾರಾಟವನ್ನು ವಿಶ್ವದಾದ್ಯಂತ ನಿಲ್ಲಿಸುತ್ತಿದ್ದೇವೆ. ಮಕ್ಕಳ ಟಾಲ್ಕಮ್ ಪೌಡರ್ ಚರ್ಮದ ಕ್ಯಾನ್ಸರ್ಗೆ ಕಾರಣವಾಗುತ್ತದೆ ಎಂದು ಹಲವು ಕಾನೂನು ಪ್ರಕರಣಗಳನ್ನು ಎದುರಿಸುತ್ತಿದೆ. ಆ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಹೇಳಿದೆ.
ಇದನ್ನೂ ಓದಿ : GST: ಮನೆ ಬಾಡಿಗೆಗೂ ಜಿಎಸ್ಟಿ..!
ನಂತರ ಮೇ 2020 ರಲ್ಲಿ ಸಾವಿರಾರು ಕಾನೂನು ಪ್ರಕರಣಗಳನ್ನು ಎದುರಿಸಿದ್ದ ಕಂಪೆನಿ ಕೆನಡಾ ಮತ್ತು ಅಮೇರಿಕಾದಲ್ಲಿ ತನ್ನ ಮಾರಾಟವನ್ನು ಸ್ಥಗಿತಗೊಳಿಸಿತ್ತು.
ಜಾನ್ಸನ್ ಆ್ಯಂಡ್ ಜಾನ್ಸನ್ ಕಂಪನಿಯ ಮಕ್ಕಳ ಟಾಲ್ಕಮ್ ಪೌಡರ್ ಜಾಗತಿಕವಾಗಿ ಹೆಚ್ಚಿನ ಪ್ರಸಿದ್ದಿ ಪಡೆದಿತ್ತು. ಜಾಗತಿಕ ಮಾರುಕಟ್ಟೆಯಲ್ಲಿಯೂ ಈ ಪೌಡರ್ ಉತ್ತನ್ನ ಹಲವು ದಶಕಗಳಿಂದ ತನ್ನ ಪಾರಮ್ಯ ಮೆರೆದಿದೆ. ಈ ಪೌಡರ್ ಬಳಕೆಯಿಂದ ಮಕ್ಕಳಲ್ಲಿ ಕ್ಯಾನ್ಸರ್ ಹರಡುತ್ತಿದೆ ಎಂದು ಕಳೆದ ದಶಕದಲ್ಲಿ ವಿಶ್ವದ ಹಲವೆಡೆಗಳಲ್ಲಿ ಪ್ರಕರಣ ದಾಖಲಿಸಲಾಗಿತ್ತು.
(ನಟ ಗಣೇಶ್, ದಿಗಂತ್, ಪವನ್ಕುಮಾರ್ ನಟನೆಯ ಯೋಗರಾಜ್ ಭಟ್ ನಿರ್ದೇಶನದ ಗಾಳಿಪಟ-2 ಚಿತ್ರದ ಪ್ರೇಕ್ಷಕರ ವಿಮರ್ಶೆ)