ರಾಜ್ಯದಲ್ಲಿರುವ ವಿವಿಧ ನ್ಯಾಯಾಲಯಗಳಲ್ಲಿ ಖಾಲಿ ಇರುವ 16 ಜಿಲ್ಲಾ ನ್ಯಾಯಾಧೀಶರ ಹುದ್ದೆಗಳಿಗೆ (Judicial Jobs) ರಾಜ್ಯ ಹೈಕೋರ್ಟ್ ಆದೇಶ ಹೊರಡಿಸಿದೆ. ಇದೇ 19 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.
ಹುದ್ದೆ : ಜಿಲ್ಲಾ ನ್ಯಾಯಾಧೀಶ
ಹುದ್ದೆಗಳ ಸಂಖ್ಯೆ : 16
ವಿದ್ಯಾರ್ಹತೆ : ಕಾನೂನು ಪದವಿ ಪಡೆದುಕೊಂಡಿರಬೇಕು ಹಾಗೂ 7 ವರ್ಷ ವಕೀಲರಾಗಿ ಸೇವೆ ಸಲ್ಲಿಸಿರಬೇಕು.
ವಯಸ್ಸಿನ ಮಿತಿ : 45 ವರ್ಷ (ಎಸ್ಸಿ,ಎಎಸ್ಟಿ ಹಾಗೂ ಇತರರಿಗೆ ವಯಸ್ಸಿನ ಮಿತಿಯಲ್ಲಿ ಹೆಚ್ಚಳವಿದೆ)
ಇದನ್ನೂ ಓದಿ : Govt Jobs: ಕರ್ನಾಟಕದಲ್ಲಿ ಎಷ್ಟು ಸರ್ಕಾರಿ ಹುದ್ದೆಗಳು ಖಾಲಿ ಇವೆ ಗೊತ್ತಾ..?
ಅರ್ಜಿ ಶುಲ್ಕ : 500 ರೂ. (ಎಸ್ಸಿ.ಎಸ್ಟಿ.ಪ್ರವರ್ಗ 1 ರ ಅಭ್ಯರ್ಥಿಗಳಿಗೆ 250 ರೂ.) ಮುಖ್ಯ ಪರೀಕ್ಷೆಗೆ ಆಯ್ಕೆಯಾದಲ್ಲಿ ಮತ್ತೊಮ್ಮೆ ಶುಲ್ಕ ಪಾವತಿ ಮಾಡಬೇಕು.
ಸಂಬಳ : 51550-63070 ರೂ.
ಅರ್ಜಿ ಸಲ್ಲಿಕೆ ಮುಕ್ತಾಯ : 19/10/2022
ಶುಲ್ಕ ಪಾವತಿಗೆ ಕೊನೆ ದಿನಾಂಕ : 21/10/2022
ಆಯ್ಕೆ ಪ್ರಕ್ರಿಯೆ : 1) ಪೂರ್ವಭಾವಿ ಪರೀಕ್ಷೆ 2)ಮುಖ್ಯ ಪರೀಕ್ಷೆ 3)ಸಂದರ್ಶನ
ಜಿಲ್ಲಾ ನ್ಯಾಯಾಧೀಶ ಹುದ್ದೆಗಳಿಗೆ (Judicial Jobs) ಅರ್ಜಿ ಸಲ್ಲಿಸುವ ಆಸಕ್ತ ಅರ್ಹ ಅಭ್ಯರ್ಥಿಗಳು, ಅಧಿಕೃತ ಅಧಿಸೂಚನೆ ಮತ್ತು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಈ ಲಿಂಕ್ https://karnatakajudiciary.kar.nic.in/distJudges2022.php ಕ್ಲಿಕ್ ಮಾಡಿ.
ಇದನ್ನೂ ಓದಿ : SBI Bank Jobs : 1673 ಹುದ್ದೆಗಳಿಗೆ ಅರ್ಜಿ ಆಹ್ವಾನ – ಇಲ್ಲಿದೆ ಹೆಚ್ಚಿನ ಮಾಹಿತಿ