ಮಹತ್ವದ ನಿರ್ಧಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಕರ್ನಾಟಕದ ಬೆಟ್ಟ ಕುರುಬ ಸಮುದಾಯಕ್ಕೆ ST ಮಾನ್ಯತೆ ನೀಡಿದೆ.
ಇವತ್ತು ನಡೆದ ಕೇಂದ್ರ ಸಂಪುಟ ಸಭೆಯಲ್ಲಿ 5 ರಾಜ್ಯಗಳ 12ಜಾತಿಗಳಿಗೆ ST ಪರಿಶಿಷ್ಟ ಜಾತಿ ಮಾನ್ಯತೆ ನೀಡುವ ತೀರ್ಮಾನ ಕೈಗೊಳ್ಳಲಾಗಿದೆ.
ಈ ವರ್ಷದ ಅಂತ್ಯದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿರುವ ಹಿಮಾಚಲಪ್ರದೇಶ ರಾಜ್ಯದ ಹಟ್ಟಿ ಸಮುದಾಯಕ್ಕೂ ST ಮಾನ್ಯತೆ ನೀಡಲಾಗಿದೆ.
ಉತ್ತರಪ್ರದೇಶದ ಗೋಂಡಾ ಸಮುದಾಯಕ್ಕೂ ST ಮಾನ್ಯತೆ ನೀಡಲಾಗಿದೆ.
ತಮಿಳುನಾಡು ಮತ್ತು ಛತ್ತೀಸಗಢದ ಜಾತಿಗಳಿಗೆ ST ಮಾನ್ಯತೆ ನೀಡಲಾಗಿದೆ.
ST ಮಾನ್ಯತೆ ನೀಡುವ ST ಕಾಯ್ದೆಗೆ ತಿದ್ದುಪಡಿ ತರಲಾಗುತ್ತದೆ.