ಲೇಖನ: ರೋಜ್ಕುಮಾರ್, ಶ್ರವಣಬೆಳಗೊಳ ಜೈನಮಠ
ಜೈನರ ಪ್ರಸಿದ್ಧ ಪುಣ್ಯ ಕ್ಷೇತ್ರ ಕಂಬದಹಳ್ಳಿಯಲ್ಲಿ ಆದಿನಾಥ ತೀರ್ಥಂಕರ ಜಿನಬಿಂಬದ ಪಂಚ ಕಲ್ಯಾಣ ಮಹೋತ್ಸವ ಕಾರ್ಯಕ್ರಮ ನೆರೆವೇರುತ್ತಿದೆ.
ಪಂಚ ಕಲ್ಯಾಣ ಪ್ರಯುಕ್ತ ರಾಜ್ಯದ ಎಲ್ಲ ಜಿಲ್ಲೆಗಳಿಗೂ ರಥ ಸಂಚಾರ ಮಾಡಿತ್ತು. ಆ ರಥ ಜೈನರ ಪವಿತ್ರ ಕ್ಷೇತ್ರ ಶ್ರವಣಬೆಳಗೊಳ ತಲುಪಿದ್ದು, ಶ್ರವಣಬೆಳಗೊಳದಲ್ಲಿ ಕಂಬದಹಳ್ಳಿಗೆ ರಥದ ಮೆರವಣಿಗೆ ಹೊರಟಿತು.
ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಕಂಬದಹಳ್ಳಿಯಲ್ಲಿರುವ ಚಂದ್ರಗಿರಿ ಬೆಟ್ಟದಲ್ಲಿ ಚತುರ್ಮುಖ ಬಸದಿಯಲ್ಲಿ ಪಂಚ ಕಲ್ಯಾಣ ಕಾರ್ಯಕ್ರಮ ನೆರೆವೇರಲಿದೆ.
ಮೇ 22ರಿಂದ ಮೇ 26ರವರವರೆಗೆ ಪಂಚ ಕಲ್ಯಾಣ ಮಹೋತ್ಸವ ನಡೆಯಲಿದೆ.