ನಿನ್ನೆ ಮೊನ್ನೆವರೆಗೂ ಟಾಲಿವುಡ್ ಆಳಿದ್ದು ಮಲಯಾಳಿ ಸುಂದರಿಯರು. ಈಗ ಕಾಲ ಬದಲಾಗಿದೆ. ಕನ್ನಡದ ಬ್ಯುಟೀಸ್ ಗೆ ಎಲ್ಲಿಲ್ಲದ ಬೇಡಿಕೆ ಬಂದಿದೆ. ಒಂದರ್ಥದಲ್ಲಿ ಟಾಲಿವುಡ್ನಲ್ಲಿ ಕನ್ನಡದ ನಾಯಕಿಯರದ್ದೇ ಹವಾ..
ಈಗಲೂ ಅನುಷ್ಕಾ ಶೆಟ್ಟಿ ಅಂದರೆ ತೆಲುಗು ಮಂದಿಗೆ ಸಖತ್ ಕ್ರೇಜ್. ಸದ್ಯ ಪೂಜಾ ಹೆಗ್ಡೆ, ರಶ್ಮಿಕಾ ಮಂದಣ್ಣ, ನಭಾ ನಟೇಶ್, ಕೃತಿ ಶೆಟ್ಟಿ, ನೇಹಾ ಶೆಟ್ಟಿ, ಶ್ರೀಲೀಲಾರಂತಹ ಸ್ಟನ್ನಿಂಗ್ ಬ್ಯುಟೀಸ್ ಡಜನ್ ಗಟ್ಟಲೆ ಸಿನೆಮಾಗಳಿಗೆ ಬುಕ್ ಆಗಿದ್ದಾರೆ. ಕನ್ನಡದ ಸುಂದರಿಯರು ಬೇಕೇಬೇಕೆಂದು ಸ್ಟಾರ್ ಹೀರೋಗಳು ಬೇಡಿಕೆ ಇಡುತ್ತಿರುವುದು ಸುಳ್ಳಲ್ಲ. ಮಹೇಶ್ ಬಾಬು – ತ್ರಿವಿಕ್ರಮ್ ಕಾಂಬಿನೇಶನ್ ನ ಹೊಸ ಸಿನಿಮಾಗೆ, ಪೂಜಾ ಹೆಗ್ಡೆ ಜೊತೆ ಶ್ರೀಲೀಲಾ ಕೂಡಾ ಚಾನ್ಸ್ ಗಿಟ್ಟಿಸಿದ್ದಾರೆ ಅನ್ನೋದು ಟಾಕ್.
ಈಗ ಇವರ ಲಿಸ್ಟ್ ಗೆ ಕೆಜಿಎಫ್ ಖ್ಯಾತಿಯ ಶ್ರೀನಿಧಿ ಶೆಟ್ಟಿಗೆ ಟಾಲಿವುಡ್ ನಲ್ಲಿ ಆಫರ್ ಗಳ ಸುರಿಮಳೆ ಆಗುತ್ತಿದೆ ಎನ್ನುವುದು ಸುದ್ದಿ. ಕೆಜಿಎಫ್ ಚಾಪ್ಟರ್ ಒನ್ ಪಾನ್ ಇಂಡಿಯಾ ರೇಂಜ್ ನಲ್ಲಿ ರಿಲೀಸ್ ಆಗಿದ್ದರೂ, ಮೊದಲ ಭಾಗದಲ್ಲಿ ಹೆಚ್ಚು ಸ್ಕೋಪ್ ಇಲ್ಲದ ಕಾರಣ ಶ್ರೀನಿಧಿ ಶೆಟ್ಟಿಗೆ ಆಫರ್ಸ್ ಬಂದಿರಲಿಲ್ಲ. ಆದರೇ, ಚಾಪ್ಟರ್ 2 ರಿಲೀಸ್ ಆದ ಬೆನ್ನಲ್ಲೇ ಶ್ರೀನಿಧಿ ಶೆಟ್ಟಿಯ ಲಕ್ ಬದಲಾಗಿ ಹೋಗಿದೆ.
ಕೆಜಿಎಫ್ ಚಾಪ್ಟರ್ 2 ನಲ್ಲಿ ಶ್ರೀನಿಧಿ ಶೆಟ್ಟಿಯ ಗ್ಲಾಮರ್, ಅಭಿನಯ ಪ್ರೇಕ್ಷಕರ ಮನಸೋರೆಗೊಂಡಿದೆ. ಸಿನಿಮಾ ಬ್ಲ್ಯಾಕ್ ಬಸ್ಟರ್ ಆದ ಕೂಡಲೇ ಶ್ರೀನಿಧಿ ಶೆಟ್ಟಿಗೆ ಡಿಮ್ಯಾಂಡ್ ಕುದುರಿದೆ. ಟಾಲಿವುಡ್ ನಿಂದ ಆಫರ್ ಮೇಲೆ ಆಫರ್ ಬರುತ್ತಿವೆ. ಎಲ್ಲಾ ಮೀಡಿಯಂ ರೇಂಜ್ ನಾಯಕರ ಸಿನಿಮಾಗಳಲ್ಲಿ ನಟಿಸುವಂತೆ ಅವಕಾಶ ಬರುತ್ತಿವೆ. ಆದರೇ, ಸ್ಕ್ರಿಪ್ಟ್, ಬ್ಯಾನರ್, ಹೀರೋ ವಿಚಾರದಲ್ಲಿ ಸಿಕ್ಕಾಪಟ್ಟೆ ಚೂಸಿ ಆಗಿರೋ ಶ್ರೀನಿಧಿ ಶೆಟ್ಟಿ, ಬಿಗ್ ಸ್ಟಾರ್ ಗಳ ಮೂವಿ ಆಫರ್ ಗಾಗಿ ಎದಿರುನೋಡುತ್ತಿದ್ದಾರೆ. ಇನ್ನೊಂದೆರಡು ವಾರಗಳಲ್ಲಿ ಒಂದೆರಡು ಪ್ರಾಜೆಕ್ಟ್ ಫೈನಲ್ ಆಗಬಹುದು ಎನ್ನುವುದು ಟಾಕ್.
ದೊಡ್ಡ ಹೀರೋ ಜೊತೆ ಒಂದು ಸಿನೆಮಾ ದಲ್ಲಿ ಚಾನ್ಸ್ ಸಿಕ್ಕಿದ್ರೆ, ಶ್ರೀನಿಧಿ ಶೆಟ್ಟಿಯ ರೇಂಜ್ ಬದಲಾಗುತ್ತದೆ ಎಂಬುದರಲ್ಲಿ ಯಾವುದೇ ಡೌಟ್ ಇಲ್ಲ