`ಸ್ಥಳೀಯ ಭಾಷೆಗಳಿಗೆ ಹಿಂದಿಯೇ ಪರ್ಯಾಯ ಭಾಷೆ ಆಗ್ಬೇಕು ಮತ್ತು ಹಿಂದಿಯೇ ದೇಶದಲ್ಲಿ ಸಂಪರ್ಕ ಭಾಷೆ ಆಗ್ಬೇಕು’ ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆಗೆ ತೀವ್ರ ಪ್ರತಿರೋಧದ ಬಳಿಕ ಕೇಂದ್ರ ಸರ್ಕಾರ ಮತ್ತು ರಾಜ್ಯದಲ್ಲಿ ಸಿಎಂ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಎಚ್ಚೆತ್ತುಕೊಂಡAತಿದೆ.
ಬೆAಗಳೂರಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ನೃಪತುಂಗ ವಿಶ್ವವಿದ್ಯಾಲಯದ ಶೈಕ್ಷಣಿಕ ಸಮುಚ್ಛಯದ ಶಂಕುಸ್ಥಾಪನೆ ನೆರವೇರಿಸಿದರು. ಈ ಶಂಕುಸ್ಥಾಪನೆಯ ಶಿಲಾಫಲಕದಲ್ಲಿ ಮೊದಲಿಗೆ ಕನ್ನಡ ಮತ್ತು ಆ ಬಳಿಕ ಇಂಗ್ಲೀಷ್ನಲ್ಲಿ ವಿವರಗಳನ್ನು ಕೆತ್ತಲಾಗಿದೆ. ಹಿಂದಿ ಬಳಕೆ ಮಾಡಿಲ್ಲ. ವೇದಿಕೆಯಲ್ಲೂ ಕನ್ನಡವೇ ಮೆರೆದಿದೆ. ಹಿಂದಿ ಬಳಕೆ ಆಗಿಲ್ಲ.
ಕಾರ್ಯಕ್ರಮದಲ್ಲಿ ಅಮಿತ್ ಷಾ ಅವರು ಮಾಡಿದ ಭಾಷಣದ ವೀಡಿಯೋ ಲಿಂಕ್ನ್ನು ಅವರ ಟ್ವಿಟ್ಟರ್ ಖಾತೆಯಲ್ಲಿ ಕನ್ನಡದಲ್ಲೇ ಒಕ್ಕಣೆ ಬರೆದು ಹಂಚಿಕೊಳ್ಳಲಾಗಿದೆ.
ಇನ್ನು ನ್ಯಾಟ್ಗ್ರಿಡ್ ಬೆಂಗಳೂರು ಕ್ಯಾಂಪಸ್ ಉದ್ಘಾಟನೆಯಲ್ಲೂ ವೇದಿಕೆಯಲ್ಲಿ ಕನ್ನಡವೇ ರಾರಾಜಿಸಿದೆ. ಇನ್ನು ಶಿಲಾಫಲಕದಲ್ಲಿ ಮೊದಲಿಗೆ ಹಿಂದಿ, ಆ ಬಳಿಕ ಕನ್ನಡಕ್ಕೆ ಆ ಬಳಿಕ ಇಂಗ್ಲೀಷ್ಗೆ ಮಾನ್ಯತೆ ನೀಡಲಾಗಿದೆ. ಈ ಹಿಂದೆಯೆಲ್ಲ ಕೇಂದ್ರ ಸರ್ಕಾರದ ಯೋಜನೆಯ ಶಿಲಾಫಲಕದಲ್ಲಿ ಹಿಂದಿ ಮತ್ತು ಇಂಗ್ಲೀಷ್ನ್ನಷ್ಟೇ ಬಿಜೆಪಿ ಸರ್ಕಾರ ಕೆತ್ತುತ್ತಿತ್ತು,
ಈ ಮೂಲಕ ಚುನಾವಣೆಗೆ 11 ತಿಂಗಳು ಬಾಕಿ ಇರುವಂತೆ ಬಿಜೆಪಿ ಸರ್ಕಾರ ಕನ್ನಡ ವಿರೋಧಿ ಎಂಬ ಹಣೆಪಟ್ಟಿ ಕಳಚಿಕೊಳ್ಳುವ ಪ್ರಯತ್ನವನ್ನು ಅಧಿಕೃತವಾಗಿ ಆರಂಭಿಸಿದೆ.