ಭಾರತೀಯ ಪುರಾತತ್ತ್ವ ಸರ್ವೇಕ್ಷಣಾ ಇಲಾಖೆಯು ವಾರಣಾಸಿಯ ಜ್ಞಾನವಾಪಿ ಮಸೀದಿ ಆವರಣದಲ್ಲಿ ನಡೆಸಿದ ಸಮೀಕ್ಷೆ ವೇಳೆ ಕನ್ನಡದ ಶಾಸನ ಪತ್ತೆಯಾಗಿದೆ.
ದೊಡ್ಡರಸಯ್ಯನ ಮತ್ತು ನರಸಂಣಬಿಂನಹ ಎಂಬ ಪದಗಳ ಬಗ್ಗೆ ಭಾರತೀಯ ಪುರಾತತ್ತ್ವ ಸರ್ವೇಕ್ಷಣಾ ಇಲಾಖೆಯು ತಜ್ಞರು ನ್ಯಾಯಾಲಯಕ್ಕೆ ನೀಡಿರುವ ವರದಿಯಲ್ಲಿ ಉಲ್ಲೇಖಿಸಿದ್ದಾರೆ.
ಈ ಶಾಸನವು 16ನೇ ಶತಮಾನಕ್ಕೆ ಸೇರಿದ್ದಾಗಿದೆ ಎಂದು ಉಲ್ಲೇಖಿಸಿ ಶಾಸನದ ಚಿತ್ರ ಸಹಿತ ದಾಖಲೆಯ ಪ್ರತಿಯನ್ನು ನ್ಯಾಯಾಲಯಕ್ಕೆ ತಜ್ಞರು ಒದಗಿಸಿದ್ದಾರೆ.