ಎಸ್ಸಿ/ ಎಸ್ಟಿಗಳನ್ನು ಊಟ ಬಡಿಸಲು ಬಿಡಬೇಡಿ, ಮೈಲಿಗೆಯಾಗುತ್ತೆ, ಅವರಿಗೆ ಬೇರೆ ಕೆಲಸಕ್ಕೆ ಕೊಡಿ ಎಂದು ಹೇಳಿ ಜಾತಿ ನಿಂದನೆ ಮಾಡಿದರು
ಎಂಬ ಆರೋಪದಡಿ ಕಾರ್ಕಳ ಬಿಜೆಪಿ ಕಾರ್ಯಕರ್ತೆ ರಮಿತ ಶೈಲೇಂದ್ರ ಕುಮಾರ್ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಐಪಿಸಿ ಸೆಕ್ಷನ್ 341, 504 ಮತ್ತು ಎಸ್ಸಿಎಸ್ಟಿ ದೌರ್ಜನ್ಯ ತಡೆ ಕಾಯ್ದೆ 3(1), 3(2)ರ ಅಡಿಯಲ್ಲಿ ಕಾರ್ಕಳ ನಗರ ಠಾಣೆಯಲ್ಲಿ ಗುರುವಾರ ಎಫ್ಐಆರ್ ದಾಖಲಾಗಿದೆ.
ADVERTISEMENT
ಕಾರ್ಕಳ ಮಾರಿಗುಡಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ರಮದಲ್ಲಿ ಸ್ವಯಂಸೇವಕಿಯಾಗಿ ಭಾಗಿ ಆಗಿದ್ದ ವೇಳೆ ಬಿಜೆಪಿ ಕಾರ್ಯಕರ್ತೆ ರಮಿತಾ ಶೈಲೇಂದ್ರ ಜಾತಿ ನಿಂದನೆ ಮಾಡಿದ್ದಾರೆ ಕಾರ್ಕಳ ಪುರಸಭೆ ಸದಸ್ಯೆ ಪ್ರತಿಮಾ ರಾಣೆ ಪೊಲೀಸರಿಗೆ ದೂರು ನೀಡಿದ್ದಾರೆ.
ಮಾರ್ಚ್ 12ರಂದು ಜೀರ್ಣೋದ್ಧಾರ ಕಾರ್ಯಕ್ರಮದ ಭೋಜನಾಲಯದಲ್ಲಿ ಸಮಿತಿ ತಮಗೆ ನೀಡಿದ್ದ ಕೆಲಸವನ್ನು ಮಾಡುವ ವೇಳೆ ಸಾರ್ವಜನಿಕರ ಎದುರಲ್ಲಿ ಎಸ್ಸಿ/ ಎಸ್ಟಿಗಳನ್ನು ಊಟ ಬಡಿಸಲು ಬಿಡಬೇಡಿ, ಮೈಲಿಗೆಯಾಗುತ್ತೆ, ಅವರಿಗೆ ಬೇರೆ ಕೆಲಸಕ್ಕೆ ಕೊಡಿ ಎಂದು ಹೇಳಿ ಸಾರ್ವಜನಿಕವಾಗಿ ಜಾತಿ ನಿಂದಿಸಿ ಅವಮಾನ ಮಾಡಿದರು. ಈ ವೇಳೆ ನಾನು ಆಕ್ಷೇಪಣೆ ಮಾಡಿದ್ದು ದೇವಸ್ಥಾನದ ಕಾರ್ಯಕ್ರಮವಾಗಿದ್ದರಿಂದ ಸುಮ್ಮನಿದೆ.
ಕಾರ್ಕಳದಲ್ಲಿ ಸಚಿವ ಸುನಿಲ್ ಕುಮಾರ್ ಅಯೋಜಿಸಿದ್ದ ಬೈಕ್ ರ್ಯಾಲಿಯಲ್ಲಿ ರಮಿತ ಶೈಲೇಂದ್ರ
ಆದರೆ ಮಾರ್ಚ್ 14ರಂದು ದೂರವಾಣಿ ಮೂಲಕ ಮತ್ತು ರಸ್ತೆಯಲ್ಲಿ ಅಡ್ಡಗಟ್ಟಿ
ನಾನು ಹೇಳಿದ್ದು ಹೌದು, ಎಲ್ಲಿ ಬೇಕಾದರೂ ನೀನು ದೂರು ಕೊಡು. ನೀನು ಯಾವುದೇ ದೂರು ನೀಡಿದರೂ ನಾನು ಹೆದರುವುದಿಲ್ಲ. ಏನು ಬೇಕಾದರೂ ಮಾಡು, ಯಾರನ್ನೂ ಬೇಕಾದರೂ ಕರೆಸಿಕೋ, ನಿನ್ನನ್ನು ಸುಮ್ಮನೆ ಬಿಡುವುದಿಲ್ಲ
ಎಂದು ರಮಿತಾ ಶೈಲೇಂದ್ರ ತಮಗೆ ಬೆದರಿಕೆ ಒಡ್ಡಿದ್ದಾರೆ ಎಂದು ದೂರಿನಲ್ಲಿ ಪ್ರತಿಮಾ ರಾಣೆ ಆರೋಪಿಸಿದ್ದಾರೆ.
ಮಾ್ರ್ಚ್ 15ರವರೆಗೆ ಮಾರಿಗುಡಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ರಮ ಇದ್ದಿದ್ದರಿಂದ ಕಾರ್ಯಕ್ರಮಕ್ಕೆ ತೊಂದರೆ ಆಗಬಾರದು ಎಂಬ ಕಾರಣಕ್ಕೆ ದೂರನ್ನು ಕೊಟ್ಟಿರಲಿಲ್ಲ
ಮಹಾಕುಂಭದಲ್ಲಿ ಭಕ್ತರು ಪವಿತ್ರ ಸ್ನಾನ ಮಾಡುತ್ತಿರುವ ನೀರು ಸ್ನಾನ ಮಾಡುವುದಕ್ಕೂ ಯೋಗ್ಯವಲ್ಲ ಎಂದು ಕೇಂದ್ರ ಸರ್ಕಾರದ ಆಧೀನದಲ್ಲಿ ಬರುವ ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿ ವರದಿ ಸಲ್ಲಿಸಿದೆ....
ಮುಸಲ್ಮಾನರ ಉಪವಾಸ ತಿಂಗಳು ಆಗಿರುವ ರಂಜಾನ್ನಲ್ಲಿ ಇಸ್ಲಾಂ ಧರ್ಮಕ್ಕೆ ಸೇರಿದ ರಾಜ್ಯ ಸರ್ಕಾರಿ ನೌಕರರು ಮತ್ತು ಗುತ್ತಿಗೆ ನೌಕರರಿಗೆ ತೆಲಂಗಾಣದಲ್ಲಿರುವ ಕಾಂಗ್ರೆಸ್ ಸರ್ಕಾರ ಮತ್ತು ಆಂಧ್ರಪ್ರದೇಶದಲ್ಲಿರುವ ತೆಲುಗು...
ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಪತ್ನಿಗೆ ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಅತ್ಯಂತ ದುಬಾರಿ ಮೊತ್ತದ ಉಡುಗೊರೆಯನ್ನು ನೀಡಿದ್ದಾರೆ. ಜೋ ಬಿಡೆನ್ ಪತ್ನಿ ಜಿಲ್ ಬಿಡೆನ್ಗೆ ಪ್ರಧಾನಿ...