ಕರ್ನಾಟಕ ವಿಧಾನಸಭಾ ಚುನಾವಣೆ ಘೋಷಣೆಗೆ ಕೆಲವೇ ದಿನಗಳು ಬಾಕಿ ಇರುವ ಹೊತ್ತಲ್ಲಿ ಬೃಹತ್ ಬೆಂಗಳೂರಲ್ಲಿ (ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ) ಯಾವ ಪಕ್ಷಕ್ಕೆ ಅಧಿಕ ಸ್ಥಾನ ಸಿಗಬಹುದು..?
ಕರ್ನಾಟಕದ ಚುನಾವಣಾ ರಾಜಕೀಯದ ಮೇಲೆ ನಿರಂತರ ನಿಗಾವಹಿಸಿರುವ ಚುನಾವಣಾ ವಿಶ್ಲೇಷಕರೊಬ್ಬರು ತಮ್ಮ ಚುನಾವಣಾ ಅಂದಾಜನ್ನು ಬಿಡುಗಡೆಗೊಳಿಸಿದ್ದಾರೆ.
ಬೆಂಗಳೂರು ನಗರದಲ್ಲಿ 28 ವಿಧಾನಸಭಾ ಕ್ಷೇತ್ರಗಳಿದ್ದು, ಬೆಂಗಳೂರು ಗ್ರಾಮಾಂತರ ವ್ಯಾಪ್ತಿಯಲ್ಲಿ 4 ವಿಧಾನಸಭಾ ಕ್ಷೇತ್ರಗಳಿವೆ.
2018ರ ವಿಧಾನಸಭಾ ಚುನಾವಣೆಯಲ್ಲಿ ಬೆಂಗಳೂರು ನಗರ 28 ಕ್ಷೇತ್ರಗಳಲ್ಲಿ ಕಾಂಗ್ರೆಸ್ 15, ಬಿಜೆಪಿ 11 ಮತ್ತು ಜೆಡಿಎಸ್ 2 ಕ್ಷೇತ್ರಗಳನ್ನು ಗೆದ್ದುಕೊಂಡಿತ್ತು.
ಬೆಂಗಳೂರು ಗ್ರಾಮಾಂತರ ವ್ಯಾಪ್ತಿಯಲ್ಲಿ 2 ಕ್ಷೇತ್ರವನ್ನು ಜೆಡಿಎಸ್, 2 ಕ್ಷೇತ್ರವನ್ನು ಕಾಂಗ್ರೆಸ್ ಗೆದ್ದುಕೊಂಡಿತ್ತು.
ಹೊಸ ಚುನಾವಣಾ ಅಂದಾಜು ಹೇಗಿದೆ..?
ಬೆಂಗಳೂರು ನಗರದಲ್ಲಿ 28 ಕ್ಷೇತ್ರಗಳ ಪೈಕಿ ಬಿಜೆಪಿ 11 ಕ್ಷೇತ್ರಗಳಲ್ಲಿ ಗೆಲ್ಲಬಹುದು ಎಂದು ಅಂದಾಜಿಸಲಾಗಿದೆ.
ಕಾಂಗ್ರೆಸ್ ಕಳೆದ ಬಾರಿಯಷ್ಟೇ ಅಂದರೆ 15 ಕ್ಷೇತ್ರಗಳಲ್ಲಿ ಗೆಲ್ಲುವ ನಿರೀಕ್ಷೆ ಇದೆ. ಜೆಡಿಎಸ್ 2 ಕ್ಷೇತ್ರಗಳಲ್ಲಿ ಗೆಲ್ಲುವ ನಿರೀಕ್ಷೆ ಇದೆ.
ಬೆಂಗಳೂರು ಗ್ರಾಮಾಂತರದಲ್ಲಿ ಕಳೆದ ಬಾರಿಯಂತೆ ಜೆಡಿಎಸ್ 2 ಮತ್ತು ಕಾಂಗ್ರೆಸ್ 2 ಕ್ಷೇತ್ರಗಳಲ್ಲಿ ಗೆಲ್ಲಲಿದೆ ಚುನಾವಣಾ ವಿಶ್ಲೇಷಕರು ಅಂದಾಜಿಸಿದ್ದಾರೆ.
ಬಿಜೆಪಿಗೆ ಆಘಾತ:
ಈ ಚುನಾವಣಾ ಸಮೀಕ್ಷೆಯಲ್ಲಿ ಬಿಜೆಪಿಗೆ ಚುನಾವಣಾ ಆಘಾತದ ಭವಿಷ್ಯ ನುಡಿಯಲಾಗಿದೆ. ಕಾರಣ 2019ರಲ್ಲಿ ನಡೆದ ಆಪರೇಷನ್ ಕಮಲದ ಕಾರಣದಿಂದ ಕಾಂಗ್ರೆಸ್ನ ನಾಲ್ವರು ಶಾಸಕರು ಮತ್ತು ಜೆಡಿಎಸ್ನ ಓರ್ವ ಶಾಸಕ ರಾಜೀನಾಮೆ ನೀಡಿದ್ದರು. ಹೀಗಾಗಿ ಸದ್ಯಕ್ಕೆ ಬೆಂಗಳೂರು ನಗರದಲ್ಲಿ ಕಾಂಗ್ರೆಸ್ 12, ಜೆಡಿಎಸ್ 1, ಬಿಜೆಪಿ 15 ಶಾಸಕರನ್ನು ಹೊಂದಿದೆ.
ಆದರೆ ಹೊಸ ಸಮೀಕ್ಷೆಯಲ್ಲಿ ಆಪರೇಷನ್ ಕಮಲದಿಂದ ಬಲವರ್ಧಿಸಿಕೊಂಡ ಬಿಜೆಪಿಗೆ ಆ ಬಲವನ್ನು ಮುಖ್ಯ ಚುನಾವಣೆಯಲ್ಲಿ ಉಳಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಅಂದಾಜು ಮಾಡಲಾಗಿದೆ.
ADVERTISEMENT
ADVERTISEMENT