No Result
View All Result
ಜನಸಾಮಾನ್ಯರಿಗೆ ರಾಜ್ಯದ ಬಿಜೆಪಿ ಸರ್ಕಾರ ಮತ್ತೆ ಬರೆ ಹಾಕಿದೆ. ಅಕ್ಟೋಬರ್ 1ರಿಂದ ವಿದ್ಯುತ್ ದರ ಮತ್ತೆ ಏರಿಕೆ ಆಗಿದೆ. ಈ ಮೂಲಕ ಏಪ್ರಿಲ್ನಿಂದ ಇಲ್ಲಿಯವರೆಗೆ ಮೂರು ಬಾರಿ ದರ ಹೆಚ್ಚಳ ಮಾಡಿದೆ.
ಎಲ್ಲಿ ಎಷ್ಟು..?
ಬೆಸ್ಕಾಂ (Bescom) ವ್ಯಾಪ್ತಿಯಲ್ಲಿ ಬರುವ ವಿದ್ಯುತ್ ಬಳಕೆದಾರರು ಪ್ರತಿ ಯುನಿಟ್ಗೆ 43 ಪೈಸೆಯಷ್ಟು ಹೆಚ್ಚಳ ಮಾಡಲಾಗಿದೆ. ಹೆಸ್ಕಾಂ (Hescom) ವ್ಯಾಪ್ತಿಯಲ್ಲಿ 35 ಪೈಸೆ, ಜೆಸ್ಕಾಂ (Gescom) ವ್ಯಾಪ್ತಿಯಲ್ಲಿ 35 ಪೈಸೆ, ಸಿಇಎಸ್ಸಿ (CESC) ವ್ಯಾಪ್ತಿಯಲ್ಲಿ 34 ಪೈಸೆ ಮತ್ತು ಮೆಸ್ಕಾಂ (Mescom) ವ್ಯಾಪ್ತಿಯಲ್ಲಿ ಪ್ರತಿ ಯುನಿಟ್ಗೆ 24 ಪೈಸೆಯಷ್ಟು ದರ ಏರಿಕೆ ಮಾಡಲಾಗಿದೆ.
ಅಕ್ಟೋಬರ್ 1ರಿಂದ ಅನ್ವಯ ಆಗುವಂತೆ ದರ ಹೆಚ್ಚಳ (Power Tariff Hike) ಜಾರಿಗೆ ಸೆಪ್ಟೆಂಬರ್ 19ರಂದು ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ಅನುಮೋದನೆ (KERC) ನೀಡಿದೆ.
ಏಕಕಾಲಕ್ಕೆ ಎರಡು ದರ ಹೆಚ್ಚಳ ಪಾವತಿ:
ಈಗ ಮತ್ತೆ ದರ ಹೆಚ್ಚಳದ ಮೂರನೇ ಆದೇಶ ಜಾರಿ ಆಗಿದೆ. ಇದರೊಂದಿಗೆ ಅಕ್ಟೋಬರ್ 1ರಿಂದ ರಾಜ್ಯದ ಜನತೆ ಜುಲೈ 1ರಿಂದ ಡಿಸೆಂಬರ್ 31ರವರೆಗೆ ಎರಡನೇ ಬಾರಿಗೆ ಆದ ದರ ಹೆಚ್ಚಳದ ಜೊತೆಗೆ ಅಕ್ಟೋಬರ್ 1ರಿಂದ ಆಗಿರುವ ಮೂರನೇ ದರ ಹೆಚ್ಚಳದ ಮೊತ್ತವನ್ನೂ ಸೇರಿಸಿ ಪಾವತಿಸಬೇಕಾಗುತ್ತದೆ. ಅಕ್ಟೋಬರ್ 1ರಿಂದ ಡಿಸೆಂಬರ್ ಅಂತ್ಯದವರೆಗೆ ಎರಡು ಬೆಲೆ ಏರಿಕೆಯ ಮೊತವನ್ನೂ ನೀಡಬೇಕಾಗುತ್ತದೆ.
ಅಂದರೆ ಬೆಸ್ಕಾಂ ವ್ಯಾಪ್ತಿಯಲ್ಲಿ (31+43 ಪೈಸೆ = 74 ಪೈಸೆ), ಹೆಸ್ಕಾಂ ( 27+35= 62 ಪೈಸೆ ) ಜೆಸ್ಕಾಂ (26+35=61 ಪೈಸೆ) ಮೆಸ್ಕಾಂ (24 + 21 ಪೈಸೆ = 45 ಪೈಸೆ) ಮತ್ತು ಸಿಇಎಸ್ಸಿ ವ್ಯಾಪ್ತಿಯಲ್ಲಿ ಪ್ರತಿ ಯುನಿಟ್ಗೆ (19+19= 38 ಪೈಸೆಯಷ್ಟು) ಪಾವತಿ ಮಾಡಬೇಕಾಗುತ್ತದೆ.
ಇದೇ ವರ್ಷದ ಏಪ್ರಿಲ್, ಜೂನ್ ತಿಂಗಳಲ್ಲೂ ವಿದ್ಯುತ್ ದರ ಏರಿಕೆ ಆಗಿತ್ತು. ಕಳೆದ 6 ತಿಂಗಳ ಅವಧಿಯಲ್ಲಿ ವಿದ್ಯುತ್ ದರ ಪ್ರತಿ ಯುನಿಟ್ಗೆ ಮೂರು ಬಾರಿ 1 ರೂಪಾಯಿಯಷ್ಟು ದುಬಾರಿ ಆಗಿದೆ.
ಏಪ್ರಿಲ್ 1ರಿಂದ ರಾಜ್ಯದಲ್ಲಿ ವಿದ್ಯುತ್ ದರ ಪ್ರತಿ ಯುನಿಟ್ಗೆ 35 ಪೈಸೆಯಷ್ಟು ಹೆಚ್ಚಳ ಆಗಿತ್ತು. ಆ ಬಳಿಕ ಜುಲೈ 1ರಿಂದ ಡಿಸೆಂಬರ್ 31ರವರೆಗೆ ಅನ್ವಯ ಆಗುವಂತೆ ಬೆಸ್ಕಾಂ – 31 ಪೈಸೆ, ಹೆಸ್ಕಾಂ – 27 ಪೈಸೆ, ಜೆಸ್ಕಾಂ – 26 ಪೈಸೆ, ಸಿಇಎಸ್ಸಿ – 19 ಪೈಸೆ ಮತ್ತು ಮೆಸ್ಕಾಂ ವ್ಯಾಪ್ತಿಯಲ್ಲಿ ಪ್ರತಿ ಯುನಿಟ್ಗೆ 21 ಪೈಸೆ ದರ ಹೆಚ್ಚಳ ಆಗಿತ್ತು.
No Result
View All Result
error: Content is protected !!