ಮಹತ್ವದ ಬೆಳವಣಿಗೆಯಲ್ಲಿ ಒಕ್ಕಲಿಗ, ಲಿಂಗಾಯತ ಮತ್ತು ದಲಿತ ಮತ್ತು ಬಿಲ್ಲವ ಸಮುದಾಯಗಳ ತೀವ್ರ ಪ್ರತಿರೋಧದ ಬಳಿಕ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ತಾನೇ ರಚಿಸಿದ್ದ ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿಯನ್ನು ವಿಸರ್ಜನೆ ಮಾಡಿದೆ.
ಈ ಮೂಲಕ ಒಕ್ಕಲಿಗ ಮತ್ತು ಲಿಂಗಾಯತ ಸಮುದಾಯ ಸ್ವಾಮೀಜಿಗಳು, ಕನ್ನಡ ಪರ ಹೋರಾಟಗಾರರು ಮತ್ತು ಸಾಹಿತಿಗಳು ಮತ್ತು ಸಾರ್ವಜನಿಕರ ಆಕ್ರೋಶಕ್ಕೆ ಕೊನೆಗೂ ಭಂಡತನ ಮತ್ತು ಮೊಂಡುತನವನ್ನು ಬಿಟ್ಟು ಬಿಜೆಪಿ ಸರ್ಕಾರ ಮಣಿದಿದೆ.
ವಜಾ ಬದಲು ಸಮಿತಿಯೇ ಬರ್ಖಾಸ್ತು:
ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯ ಕಾರ್ಯಗಳು ಮುಗಿದಿರುವ ಹಿನ್ನೆಲೆಯಲ್ಲಿ ರೋಹಿತ್ ಚಕ್ರತೀರ್ಥ ನೇತೃತ್ವದ ಸಮಿತಿಯನ್ನು ವಿಸರ್ಜನೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದ್ದಾರೆ.
ವಿಕೃತಿಯ ಮೂಲ ವ್ಯಕ್ತಿ ಬಗ್ಗೆ ತನಿಖೆ:
ಆದರೆ ಶಾಲಾ ಪಠ್ಯಗಳಲ್ಲಿ ಸುಳ್ಳು ಪಠ್ಯಗಳನ್ನು ಸೇರಿಸಿದ್ದಲ್ಲದೇ ರಾಷ್ಟ್ರಕವಿ ಕುವೆಂಪು ಮತ್ತು ನಾಡಗೀತೆಗೆ ಅವಮಾನ ಮಾಡಿದ್ದ ರೋಹಿತ್ ಚಕ್ರತೀರ್ಥ ವಜಾ ಮಾಡುವ ಬದಲು ಸರ್ಕಾರ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯನ್ನೇ ಬರ್ಖಾಸ್ತು ಮಾಡಿ ರೋಹಿತ್ ಚಕ್ರತೀರ್ಥ ಹಿತ ಕಾಯುವ ಕೆಲಸ ಮಾಡಿದೆ.
ರಾಷ್ಟ್ರಕವಿ ಕುವೆಂಪು ಅವರು ಬರೆದಿರುವ ನಾಡಗೀತೆಯನ್ನು ವಿಕೃತಗೊಳಿಸಿದ ಕವನ ಬರೆದ ಮೂಲ ವ್ಯಕ್ತಿಗಳ ವಿರುದ್ಧ ತನಿಖೆ ನಡೆಸಲು ಸರ್ಕಾರ ನಿರ್ಧರಿಸಿದೆ.
ಪರಿಷ್ಕೃತ ಪಠ್ಯಪುಸ್ತಕ ಮತ್ತೆ ಪರಿಷ್ಕರಣೆ:
ಪ್ರಸ್ತುತ ಪರಿಷ್ಕರಿಸಿರುವ ಪಠ್ಯಪುಸ್ತಕದಲ್ಲಿ ಯಾವುದಾದರೂ ಆಕ್ಷೇಪಾರ್ಹ ವಿಷಯಗಳಿದ್ದಲ್ಲಿ ಅವುಗಳನ್ನು ಮತ್ತೊಮ್ಮೆ ಪರಿಷ್ಕರಣೆ ಮಾಡಲು ಸರ್ಕಾರ ಮುಕ್ತ ಮನಸ್ಸು ಹೊಂದಿದೆ ಮತ್ತು ಬಸವಣ್ಣನವರ ವಿಷಯಕ್ಕೆ ಸಂಬAಧಿಸಿದAತೆ ಸೂಕ್ತವಾಗಿ ಪರಿಷ್ಕರಿಸಲು ನಿರ್ಧರಿಸಲಾಗಿದೆ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ.
ಪ್ರಸ್ತುತ ಪಠ್ಯಪುಸ್ತಕದಲ್ಲಿರುವ ಬಸವಣ್ಣನವರ ವಿಷಯಾಂಶವನ್ನು ಯಾರ ಭಾವನೆಗೂ ಧಕ್ಕೆ ತರದಂತೆ ಪರಿಷ್ಕರಿಸಲಾಗುವುದು ಸಿಎಂ ಘೋಷಿಸಿದ್ದಾರೆ.