ಲೋಕಸಭಾ ಚುನಾವಣೆಗಾಗಿ ಅಲ್ಪಸಂಖ್ಯಾತರ ಓಲೈಕೆಗೆ 10 ಸಾವಿರ ಕೋಟಿ ಅನುದಾನ ಕೊಡೋದಾಗಿ ಹೇಳಿಕೆ ನೀಡಿದ್ದನ್ನೇ ವಿಪಕ್ಷ ಬಿಜೆಪಿ ಅಸ್ತ್ರವನ್ನಾಗಿಸಿಕೊಂಡು ಸಿಎಂ ಅಲ್ಪಸಂಖ್ಯಾತರನ್ನ ಮೆಚ್ಚಿಸಲು ಮಾಡಬಹುದಾದ ಘನಂದಾರಿ ಕೆಲಸಗಳು ಎಂದು ಪಟ್ಟಿ ಬಿಡುಗಡೆ ಮಾಡೋ ಮೂಲಕ ವ್ಯಂಗ್ಯ ಮಾಡಿದೆ.
ಈ ಕುರಿತು ರಾಜ್ಯ ಬಿಜೆಪಿ ಟ್ವೀಟ್ ಮಾಡಿದ್ದು, ತುಷ್ಟೀಕರಣದ ಉತ್ತುಂಗಕ್ಕೆ ತಲುಪಿರುವ ಸಿದ್ದರಾಮಯ್ಯ ಸಾಹೇಬರು ನಾಳೆ ಯತೀಂದ್ರ ಅವರಿಗೆ “ಟಿಪ್ಪು” ಎಂದು ನಾಮಕರಣ ಮಾಡಿದರೂ ಅಚ್ಚರಿ ಇಲ್ಲ ಎಂದು ಬಿಜೆಪಿ ಹೇಳಿದೆ.
ಸಿಎಂ ಅಲ್ಪಸಂಖ್ಯಾತರನ್ನ ಮೆಚ್ಚಿಸಲು ಮಾಡಬಹುದಾದ ಘನಂದಾರಿ ಕೆಲಸಗಳು
▪️ಮೈಸೂರಿನಲ್ಲಿ ಟಿಪ್ಪು ವಿಮಾನ ನಿಲ್ದಾಣ
▪️ವಿಧಾನಸೌಧಕ್ಕೆ ಟಿಪ್ಪು ಸೌಧವೆಂದು ಮರು ನಾಮಕರಣ
▪️ಮೈಸೂರು ವಿವಿಗೆ ಟಿಪ್ಪು ಹೆಸರು
▪️ಟಿಪ್ಪುವಿನ 108 ಅಡಿ ಪ್ರತಿಮೆ
▪️ಟಿಪ್ಪು ಮದ್ಯದ ಬಾಟಲಿ
▪️ಬಿಎಂಟಿಸಿ/ಕೆಎಸ್ಆರ್ಟಿಸಿಗೆ ಟಿಪ್ಪು ಸಾರಿಗೆ ಎಂಬ ಹೆಸರು.
ನಾಡ ವಿರೋಧಿ, ಕನ್ನಡ ವಿರೋಧಿ, ಹಿಂದೂ ವಿರೋಧಿ, ಮತಾಂಧ ಟಿಪ್ಪುವನ್ನು ಕಾಂಗ್ರೆಸ್ ಸರ್ಕಾರ ಪಠ್ಯಪುಸ್ತಕದಲ್ಲಿ ಸೇರಿಸುವ ಮೂಲಕ ಈ ನಾಡಿನ ಮಕ್ಕಳ ಬ್ರೈನ್ ವಾಶ್ ಮಾಡುತ್ತಿದೆ. ನಮ್ಮ ಭಾರತೀಯ ಪರಂಪರೆಯನ್ನೇ ಅಳಿಸಿ ಹಾಕಿ ಪಾರ್ಸಿ ಪರಂಪರೆಗೆ ನಾಂದಿ ಹಾಡಿದ್ದ ಕ್ರೂರಿಯನ್ನು ಸಿದ್ದರಾಮಯ್ಯ ಅವರು ಕೇವಲ ತುಷ್ಟೀಕರಣಕ್ಕೆ ತಲೆ ಮೇಲೆ ಹೊತ್ತು ಮೆರೆಸುತ್ತಿದ್ದಾರೆ. ಪರಿಣಾಮ ಮಕ್ಕಳ ಭವಿಷ್ಯಕ್ಕೆ ಅನಾವಶ್ಯಕವಾದ ಟಿಪ್ಪುವಿನ ಪಠ್ಯವನ್ನು ತುಂಬುವುದಲ್ಲದೆ ಮೊಘಲರೇ ಈ ದೇಶದ ದೊರೆಗಳೆಂದು ಬಿಂಬಿಸಲಾಗುತ್ತಿದೆ. ಸುಳ್ಳು ಇತಿಹಾಸವನ್ನು ಮಕ್ಕಳಿಗೆ ನೀಡಿ ಕಾಂಗ್ರೆಸ್ ತನ್ನ ಎಡಬಿಡಂಗಿ ಸಿದ್ಧಾಂತವನ್ನು ಹೇರುತ್ತಿದೆ- ಎಂದು ಬಿಜೆಪಿ ಕಿಡಿಕಾರಿದೆ.