ಪಡಿತರ ಚೀಟಿ ತಿದ್ದುಪಡಿಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅವಕಾಶ ನೀಡಿದೆ. ಈಗಿರುವ ಪಡಿತರ ಚೀಟಿಯಲ್ಲಿ ಕುಟುಂಬದ ಹೊಸ ಸದಸ್ಯರ ಸೇರ್ಪಡೆ ಅಥವಾ ಸದಸ್ಯರನ್ನು ತೆಗೆದುಹಾಕಿ ತಿದ್ದುಪಡಿ ಮಾಡಬಹುದಾಗಿದೆ.
ಹಾಗಾದರೆ ಬಿಪಿಎಲ್ ಕಾರ್ಡ್ ಪಡೆಯಲು ಇರುವ ಅರ್ಹತೆ ಮತ್ತು ನಿಯಮಗಳೇನು..?
1. ಕುಟುಂಬದ ವಾರ್ಷಿಕ ಆದಾಯ 1 ಲಕ್ಷದ 20 ಸಾವಿರದ ಮಿತಿ ಮೀರಬಾರದು.
2. BPL ಕಾರ್ಡ್ ಹೊಂದಿರುವ ಕುಟುಂಬದ ಬಳಿ ಇರುವ ಭೂಮಿ 3 ಹೆಕ್ಟೇರ್ಗಿಂತ (7.41 ಎಕರೆ) ಮೀರಬಾರದು.
3. ವೈಟ್ಬೋರ್ಡ್ ಇರುವ ನಾಲ್ಕು ಚಕ್ರದ ವಾಹನ ಇರಬಾರದು.
4. ನಗರ ಭಾಗದಲ್ಲಿ ಸ್ವಂತ ಮನೆಯ ವೀಸ್ತೀರ್ಣ 1 ಸಾವಿರ ಚದರಡಿ ಮೀರಿರಬಾರದು.
5. ವಾಣಿಜ್ಯ ತೆರಿಗೆ ಅಥವಾ ಆದಾಯ ತೆರಿಗೆ ಪಾವತಿಸುವ ಅಥವಾ ಐಟಿ ರಿಟರ್ನ್ಸ್ ಸಲ್ಲಿಸುವ ಕುಟುಂಬಕ್ಕೆ ಬಿಪಿಎಲ್ ಕಾರ್ಡ್ ಸಿಗಲ್ಲ.
6. ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬದ ಯಾವುದೇ ಸದಸ್ಯ ಸರ್ಕಾರಿ ನೌಕರನಾಗಿರಬಾರದು.
ಒಂದು ವೇಳೆ ಈ ನಿಯಮಗಳನ್ನು ಉಲ್ಲಂಘಿಸಿ ಬಿಪಿಎಲ್ ಕಾರ್ಡ್ ಪಡೆದುಕೊಂಡರೆ ಅಂತಹ ಕಾರ್ಡ್ದಾರರ ವಿರುದ್ಧ ಕಾನೂನು ರೀತಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಕ್ರಮಕೈಗೊಳ್ಳಲಿದೆ.
ADVERTISEMENT
ADVERTISEMENT