ರಾಜ್ಯದಲ್ಲಿ ಆಗುತ್ತಿರುವ ಧಾರಾಕಾರ ಮಳೆಯಿಂದಾಗಿ ಕಾವೇರಿ ಕೊಳ್ಳದ ನಾಲ್ಕೂ ಜಲಾಶಯಗಳು ಭರ್ತಿಯಾಗಿವೆ.
ಕರ್ನಾಟಕ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರ ನೀಡಿರುವ ಮಾಹಿತಿ ಪ್ರಕಾರ
ಹಾರಂಗಿ –
ಒಟ್ಟು ಸಾಮರ್ಥ್ಯ – 8.50 ಟಿಎಂಸಿ
ಕಳೆದ ವರ್ಷ ಜುಲೈ 25ರಂದು – 6.60 ಟಿಎಂಸಿ
ಈ ವರ್ಷ ಜುಲೈ 25ರಂದು – 8.50 ಟಿಎಂಸಿ
ಶೇಕಡಾ 92ರಷ್ಟು ಭರ್ತಿಯಾಗಿದೆ.
ಹೇಮಾವತಿ
ಒಟ್ಟು ಸಾಮರ್ಥ್ಯ – 37.10 ಟಿಎಂಸಿ
ಕಳೆದ ವರ್ಷ ಜುಲೈ 25ರಂದು- 23.95 ಟಿಎಂಸಿ
ಈ ವರ್ಷ ಜುಲೈ 25ರಂದು – 36.14 ಟಿಎಂಸಿ
ಶೇಕಡಾ 97ರಷ್ಟು ಭರ್ತಿಯಾಗಿದೆ.
ಕೆಆರ್ಎಸ್
ಒಟ್ಟು ಸಾಮರ್ಥ್ಯ – 49.45 ಟಿಎಂಸಿ
ಕಳೆದ ವರ್ಷ ಜುಲೈ 25ರಂದು – 22.81 ಟಿಎಂಸಿ
ಈ ವರ್ಷ ಜುಲೈ 25ರಂದು – 49.45 ಟಿಎಂಸಿ
ಶೇಕಡಾ 100ಕ್ಕೆ ನೂರರಷ್ಟು ಭರ್ತಿಯಾಗಿದೆ
ಕಬಿನಿ
ಒಟ್ಟು ಸಾಮರ್ಥ್ಯ – 19.52 ಟಿಎಂಸಿ
ಕಳೆದ ವರ್ಷ ಜುಲೈ 25ರಂದು – 17.35 ಟಿಎಂಸಿ
ಈ ವರ್ಷ ಜುಲೈ 25ರಂದು – 18.38 ಟಿಎಂಸಿ
ಶೇಕಡಾ 94ರಷ್ಟು ಭರ್ತಿಯಾಗಿದೆ. ಕಾವೇರಿ ಕೊಳ್ಳದ ಈ ನಾಲ್ಕೂ ಜಲಾಶಯಗಳ ಒಟ್ಟು ಸಾಮರ್ಥ್ಯ 114.57 ಟಿಎಂಸಿ. ಕಳೆದ ವರ್ಷ ಇದೇ ಅವಧಿಗೆ 70.70 ಟಿಎಂಸಿ ನೀರು ಸಂಗ್ರಹವಾಗಿತ್ತು. ಆದರೆ ಈ ಬಾರಿ 111.81 ಟಿಎಂಸಿ ನೀರು ಸಂಗ್ರಹವಾಗಿದೆ. ಅಂದರೆ 41 ಟಿಎಂಸಿಗೂ ಅಧಿಕ ನೀರು ಸಂಗ್ರಹವಾಗಿದೆ.
ಕೆಆರ್ಎಸ್ ಜಲಾಶಯಕ್ಕೆ 42 ಸಾವಿರ ಕ್ಯೂಸೆಕ್ನ್ನಷ್ಟು ನೀರಿನ ಒಳಹರಿವು ಇದ್ದು, 30 ಸಾವಿರ ಕ್ಯೂಸೆಕ್ನ್ನಷ್ಟು ನೀರನ್ನು ಹೊರಬಿಡಲಾಗುತ್ತಿದೆ. ಹೇಮಾವತಿ ಜಲಾಶಯಕ್ಕೆ 34 ಸಾವಿರದಷ್ಟು ಕ್ಯೂಸೆಕ್ ನೀರು ಒಳಹರಿವು ಇದ್ದು, 34 ಸಾವಿರದಷ್ಟು ನೀರನ್ನು ಹೊರಬಿಡಲಾಗುತ್ತಿದೆ.
ADVERTISEMENT
ADVERTISEMENT