ADVERTISEMENT
ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಆಗುತ್ತಿರುವ ಭಾರೀ ಮಳೆಯ ಕಾರಣ ಕೃಷ್ಣ ಕೊಳ್ಳದ ಡ್ಯಾಂಗಳಿಗೆ ಒಳಹರಿವು ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗಿದೆ.
ಆಲಮಟ್ಟಿ ಜಲಾಶಯಕ್ಕೆ 1 ಲಕ್ಷದ 76 ಸಾವಿರ ಕ್ಯೂಸೆಕ್ ಒಳಹರಿವು ಇದ್ದು, ಡ್ಯಾಂನಿಂದ 2 ಲಕ್ಷದ 11 ಸಾವಿರ ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ.
ನಾರಾಯಣಪುರ ಜಲಾಶಯಕ್ಕೆ 2 ಲಕ್ಷದ 6 ಸಾವಿರ ಕ್ಯೂಸೆಕ್ ನೀರಿನ ಒಳಹರಿವು ಇದ್ದು, ಜಲಾಶಯಶದಿಂದ 2 ಲಕ್ಷದ 11 ಸಾವಿರ ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ.
ಕೃಷ್ಣ ಕೊಳ್ಳದ 6 ಡ್ಯಾಂಗಳ ಇಂದಿನ ನೀರಿನ ಮಟ್ಟ ಈ ರೀತಿ ಇದೆ:
ಭದ್ರಾ
ಒಟ್ಟು ಸಾಮರ್ಥ್ಯ – 71.54 ಟಿಎಂಸಿ
ಕಳೆದ ವರ್ಷ ಜುಲೈ 25ರಂದು – 36.53 ಟಿಎಂಸಿ
ಈ ವರ್ಷ ಜುಲೈ 25ರಂದು – 54.50 ಟಿಎಂಸಿ
ತುಂಗಭದ್ರಾ
ಒಟ್ಟು ಸಾಮರ್ಥ್ಯ – 105.79 ಟಿಎಂಸಿ
ಕಳೆದ ವರ್ಷ ಜುಲೈ 25ರಂದು -31.66 ಟಿಎಂಸಿ
ಈ ವರ್ಷ ಜುಲೈ 25ರಂದು – 101.42 ಟಿಎಂಸಿ
ಘಟಪ್ರಭಾ
ಒಟ್ಟು ಸಾಮರ್ಥ್ಯ – 51.00 ಟಿಎಂಸಿ
ಕಳೆದ ವರ್ಷ ಜುಲೈ 25ರಂದು – 23.64 ಟಿಎಂಸಿ
ಈ ವರ್ಷ ಜುಲೈ 25ರಂದು – 45.74 ಟಿಎಂಸಿ
ಮಲಪ್ರಭಾ
ಒಟ್ಟು ಸಾಮರ್ಥ್ಯ – 37.73 ಟಿಎಂಸಿ
ಕಳೆದ ವರ್ಷ ಜುಲೈ 25ರಂದು – 14.33 ಟಿಎಂಸಿ
ಈ ವರ್ಷ ಜುಲೈ 25ರಂದು – 23.61 ಟಿಎಂಸಿ
ಆಲಮಟ್ಟಿ
ಒಟ್ಟು ಸಾಮರ್ಥ್ಯ – 123.08 ಟಿಎಂಸಿ
ಕಳೆದ ವರ್ಷ ಜುಲೈ 25ರಂದು – 71.81 ಟಿಎಂಸಿ
ಈ ವರ್ಷ ಜುಲೈ 25ರಂದು – 88.29 ಟಿಎಂಸಿ
ನಾರಾಯಣಪುರ
ಒಟ್ಟು ಸಾಮರ್ಥ್ಯ – 33.31 ಟಿಎಂಸಿ
ಕಳೆದ ವರ್ಷ ಜುಲೈ 25ರಂದು – 16.79 ಟಿಎಂಸಿ
ಈ ವರ್ಷ ಜುಲೈ 25ರಂದು – 27.21 ಟಿಎಂಸಿ
ಕೃಷ್ಣ ಕೊಳ್ಳದ ಡ್ಯಾಂಗಳಲ್ಲಿ ನೀರಿನ ಸಂಗ್ರಹಣಾ ಸಾಮರ್ಥ್ಯ 422 ಟಿಎಂಸಿ. ಕಳೆದ ವರ್ಷ ಇದೇ ಅವಧಿಯಲ್ಲಿ 194.73 ಟಿಎಂಸಿ ನೀರು ಸಂಗ್ರಹವಾಗಿತ್ತು. ಈ ಬಾರಿ 341.37 ಟಿಎಂಸಿ ನೀರು ಸಂಗ್ರಹವಾಗಿದೆ.
ADVERTISEMENT