ಕರ್ನಾಟಕ ವಿಧಾನಸಭಾ ಚುನಾವಣೆಗೆ 11 ತಿಂಗಳು ಬಾಕಿ ಇರುವಂತೆ ಮೊದಲ ಚುನಾವಣಾ ಪೂರ್ವ ಸಮೀಕ್ಷೆ ಪ್ರಕಟವಾಗಿದೆ.
ಈ ಸಮೀಕ್ಷೆಯ ಪ್ರಕಾರ ಕರ್ನಾಟಕದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲ್ಲ. ಅತೀ ದೊಡ್ಡ ಪಕ್ಷವಾಗಿ ಕಾಂಗ್ರೆಸ್ ಹೊರಹೊಮ್ಮಲಿದೆ. ಜೆಡಿಎಸ್ ಇನ್ನಷ್ಟು ಸ್ಥಾನಗಳನ್ನು ಕಳೆದುಕೊಳ್ಳಲಿದೆ ಎಂದು ಈ ಸಮೀಕ್ಷೆ ಹೇಳಿದೆ.
ಲೋಕ್ಪೋಲ್ ನಡೆಸಿರುವ ಚುನಾವಣಾ ಪೂರ್ವ ಸಮೀಕ್ಷೆಯ ಪ್ರಕಾರ
ಬಿಜೆಪಿ 91 ಸೀಟುಗಳನ್ನಷ್ಟೇ ಗೆಲ್ಲಬಹುದು. 2018ರ ಚುನಾವಣೆಯಲ್ಲಿ ಬಿಜೆಪಿ 104 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಅಂದರೆ ಈ ಸಮೀಕ್ಷೆಯ ಪ್ರಕಾರ 2023ಕ್ಕೆ ಸರ್ಕಾರ ರಚನೆಗೆ ಬಿಜೆಪಿಗೆ 22 ಶಾಸಕರ ಕೊರತೆ ಕಾಡಲಿದೆ.
ಜೆಡಿಎಸ್ಗೆ 23 ಸೀಟುಗಳು ಬರಬಹುದು ಎಂದು ಸಮೀಕ್ಷೆ ಅಂದಾಜಿಸಿದೆ. ಅಂದರೆ 2018ರ ಫಲಿತಾಂಶಕ್ಕೆ ಹೋಲಿಸಿದ್ರೆ ಜೆಡಿಎಸ್ 14 ಸ್ಥಾನಗಳನ್ನು ಕಳೆದುಕೊಳ್ಳಲಿದೆ. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದಲ್ಲಿ ಮಿಷನ್ 123 ಅಭಿಯಾನ ಕೈಗೊಂಡಿರುವ ಜೆಡಿಎಸ್ಗೆ ಕೊನೆಯ ಎರಡಂಕಿಯಷ್ಟೇ (23) ಸೀಟುಗಳಷ್ಟೇ ಬರಬಹುದು ಎಂದು ಅಂದಾಜಿಸಲಾಗಿದೆ.
ಕಾAಗ್ರೆಸ್ಗೆ 103 ಸೀಟುಗಳು ಬರಬಹುದು ಸಮೀಕ್ಷೆ ಅಂದಾಜಿಸಿದೆ. ಅಂದರೆ 2018ರ ಚುನಾವಣಾ ಫಲಿತಾಂಶಕ್ಕೆ ಹೋಲಿಸಿದ್ರೆ 23 ಸೀಟುಗಳನ್ನು ವರ್ಧಿಸಿಕೊಳ್ಳಲಿದೆ. ಆದರೆ ಸರ್ಕಾರ ರಚನೆಗೆ ಕಾಂಗ್ರೆಸ್ಗೆ 10 ಸೀಟುಗಳ ಕೊರತೆ ಕಾಡಲಿದೆ.
7 ಮಂದಿ ಸ್ವತಂತ್ರ ಅಭ್ಯರ್ಥಿಗಳು ಆಯ್ಕೆ ಆಗಬಹುದು ಎಂದು ಸಮೀಕ್ಷೆ ಅಂದಾಜಿಸಿದೆ. ಕಳೆದ ಬಾರಿ 3 ಸ್ವತಂತ್ರ ಅಭ್ಯರ್ಥಿಗಳು ಆಯ್ಕೆ ಆಗಿದ್ದರು.
ಈ ಸಮೀಕ್ಷೆಯ ಸ್ವತಂತ್ರ ಅಭ್ಯರ್ಥಿಗಳು ಮತ್ತ ಜೆಡಿಎಸ್ ಸರ್ಕಾರ ರಚನೆಯಲ್ಲಿ ಬೆಂಬಲ ನೀಡುವುದು ಅನಿವಾರ್ಯ ಆಗಬಹುದು. ಆದರೆ ಜೆಡಿಎಸ್ ಶಾಸಕರ ಸಂಖ್ಯೆ ಕುಸಿತ ಆಗಬಹುದು ಎಂಬ ಅಂಶವನ್ನು ಸಮೀಕ್ಷೆ ಹೇಳಿರುವ ಕಾರಣ ಕುಮಾರಸ್ವಾಮಿ ಮತ್ತೆ ಮುಖ್ಯಮಂತ್ರಿ ಆಗುವುದು ಅನುಮಾನ ಆಗಬಹುದು.