15 ದಿನದೊಳಗೆ ಹೊಸ ಪಡಿತರ ಚೀಟಿ ವಿತರಣೆ ಮಾಡಲಾಗುವುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ ಹೆಚ್ ಮುನಿಯಪ್ಪ ಹೇಳಿದ್ದಾರೆ.
ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಹೊಸ ಪಡಿತರ ಚೀಟಿ ವಿತರಣೆ ನಿಲ್ಲಿಸಲಾಗಿತ್ತು. ಇನ್ನು 15 ದಿನದೊಳಗೆ ಪರಿಶೀಲಿಸಿ ಹೊಸ ಪಡಿತರ ಚೀಟಿ ವಿತರಣೆ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ
ಎಂದು ಸಚಿವರು ಹೇಳಿದ್ದಾರೆ.
ಹೊಸ ಪಡಿತರ ಚೀಟಿಗಾಗಿ 2 ಲಕ್ಷದ 95 ಸಾವಿರ ಕುಟುಂಬಗಳು ಅರ್ಜಿ ಸಲ್ಲಿಸಿವೆ. ಆ ಅರ್ಜಿಗಳನ್ನು ಬಿಪಿಎಲ್, ಎಪಿಎಲ್ ಎಂದು ವಿಂಗಡಿಸಿ ವಿತರಣೆ ಮಾಡಲಾಗುತ್ತದೆ.
ಹೊಸ ಪಡಿತರ ಚೀಟಿ ವಿತರಣೆ ಆಗದೇ ಹೋದರೆ ಏನು ಮಾಡಬಹುದು ಎಂಬ ಮಾಹಿತಿ ಇಲ್ಲಿದೆ
ಹೊಸ ಪಡಿತರ ಚೀಟಿಯನ್ನು ಪಡೆಯಲು ಸಾರ್ವಜನಿಕ ಆಹಾರ ನಿರೀಕ್ಷಕರನ್ನು ಸಂಪರ್ಕ ಮಾಡಬೇಕು. ಹೊಸ ಪಡಿತರ ಚೀಟಿಗೆ ಯಾವುದೇ ಶುಲ್ಕ ಇರುವುದಿಲ್ಲ. ಅರ್ಜಿ ಸಲ್ಲಿಸಿದ 40 ದಿನದೊಳಗೆ ಪಡಿತರ ಚೀಟಿ ವಿತರಣೆ ಆಗಬೇಕು.
40 ದಿನದೊಳಗೆ ಹೊಸ ಪಡಿತರ ಚೀಟಿ ನೀಡದೇ ಇದದದರೆ ಆಗ ತಹಶೀಲ್ದಾರ್ ಅವರಿಗೆ ದೂರು ನೀಡಬಹುದು. ಈ ದೂರನ್ನು 15 ದಿನದೊಳಗೆ ಇತ್ಯರ್ಥ್ಯ ಮಾಡಬೇಕು. ಒಂದು ವೇಳೆ ತಹಶೀಲ್ದಾರ್ ಅವರ ನಿರ್ಧಾರ ಅರ್ಜಿದಾರರು ಒಪ್ಪದೇ ಇದ್ದಲ್ಲಿ ಮೇಲ್ಮನವಿ ಸಲ್ಲಿಕೆಗೂ ಅವಕಾಶ ಇದೆ. ಆ ಮೇಲ್ಮನವಿ ಬಗ್ಗೆಯೂ 15 ದಿನದೊಳಗೆ ನಿರ್ಧಾರ ಕೈಗೊಳ್ಳಬೇಕು.
ADVERTISEMENT
ADVERTISEMENT